×
Ad

ಯಾದಗಿರಿಯಲ್ಲಿ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ

ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೆರವಣಿಗೆ

Update: 2025-12-28 19:58 IST

ಯಾದಗಿರಿ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮಾನವ ಬಂಧು ವೇದಿಕೆ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಹಾಗೂ ವೈಚಾರಿಕ ದಿನಾಚರಣೆ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳವರೆಗೆ ಆಯೋಜಿಸಿರುವ ರಾಜ್ಯ ಮಟ್ಟದ 5 ನೇ ವೈಜ್ಞಾನಿಕ ಸಮ್ಮೇಳನದ ಆರಂಭದ ದಿನವಾದ ಭಾನುವಾರ ಮಧ್ಯಾಹ್ನ 3.45 ರ ಸುಮಾರಿಗೆ ಮೈಲಾಪುರ ಅಗಸಿಯಿಂದ ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೆರವಣಿಗೆ ಆರಂಭವಾಯಿತು.

ಅಧ್ಯಕ್ಷರ ಜತೆಗೆ ಅವರ ಪತ್ನಿ ಶರಾವತಿ ಸತ್ಯಂಪೇಟೆ ಇದ್ದರು.

ಗುರುಮಠಕಲ್ ಖಾಸಾಮಠದ ಮತ್ತು ಚಿಗರಳ್ಳಿಯ ಶಂಕರಪೀಠದ ಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಸಮುಖ್ಮದಲ್ಲಿ ಚಾಲನೆ ನೀಡಲಾಯಿತು.

ಇದೇ ವೇಳೆ ಪರಿಷತ್ತಿನ ಧ್ವಜ ಹಸ್ತಾಂತರ ಮಾಡಲಾಯಿತು. ಪರಿಷತ್ತಿನ ಪದಾಧಿಕಾರಿಗಳು, ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು, ಭಾರತ ಸೇವಾದಳ ಮತ್ತು ಸ್ವೌಟ್ ಮತ್ತು ಗೈಡ್ಸ್ ನ ಶಿಕ್ಷಕ,ಮಕ್ಕಳ ವೃಂದ, ಶಾಲಾ ಮಕ್ಕಳು, ಆಳಂದ ತಾಲೂಕಿನ ತೀರ್ಥ ತಾಂಡಾದ ಮಹಿಳೆಯರು ಕುಂಭ ಕಳಸದೊಂದಿಗೆ ನೃತ್ಯದೊಂದಿಗೆ ಗಮನ ಸೆಳೆದರು.

ಬಾಜಾ, ಭಜಂತ್ರಿ, ಡೊಳ್ಳುಗಳ ನಿನಾದ ನೋಡುಗರ ಗಮನ ಸೆಳೆಯಿತು. ಗಣ್ಯರು, ಆಯೋಜಕರು, ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಿದ್ದವು.

ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಡಾ.ಭೀಮಣ್ಣಾ ಮೇಟಿ, ಎ.ಸಿ.ಕಾಡ್ಲಾರ್, ಹಣುಮೇಗೌಡ ಬಿರನಕಲ್, ಮರೆಪ್ಪ ಚಟ್ಟರಕಿ, ಎಸ್.ಎಸ್.ನಾಯಕ, ಗುಂಡಪ್ಪ ಕಲಬುರಗಿ, ರವಿಂದ್ರ ಶಾಬಾದಿ, ಡಾ. ಶಿವರಂಜನ್ ಸತ್ಯಂಪೇಟೆ,ಡಾ.ಅಶೋಕ‌ ದೊಡ್ಡಮನಿ, ಚನ್ನಪ್ಪಗೌಡ ಮೊಸಂಟಿ, ವಿಶ್ವನಾಥ ಸಿರವಾಳ, ಸೋಮಶೇಖರ ಮಣೂರ್, ಡಾ. ಭೀಮರಾಯ ಲಿಂಗೇರಿ, ಶರಣು ನಾಟೆಕರ್, ಹುಸನಪ್ಪ, ಜೇವರ್ಗಿ ತಾಲೂಕು ಪರಿಷತ್ತಿನ ಪದಾಧಿಕಾರಿಗಳು ಇದ್ದರು

ಮೆರವಣಿಗೆಯು ಮೈಲಾಪುರ ಅಗಸಿ ಮಾರ್ಗವಾಗಿ ಗಾಂಧಿ ಚೌಕ್, ನಗರಸಭೆ ಪಕ್ಕದ ರಸ್ತೆ ಮಾರ್ಗವಾಗಿ ಡಿಗ್ರಿ ಕಾಲೇಜ್ ರಸ್ತೆಯಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿ ಮುಕ್ತಾಯವಾಯಿತು.




 





 


 



ಡಿ.29 ರಂದು ಸಮ್ಮೇಳನದಲ್ಲಿ ಏನೇನು?

ಡಿ.29 ರಂದು ಬೆಳಗ್ಗೆ 9 ಕ್ಕೆ ಜಿಪಂ ಸಿಇಒ ಲವೀಶ್ ಒರ್ಡಿಯಾ ಅವರು ರಾಷ್ಟ್ರಧ್ವಜಾರೋಹಣ ಮತ್ತು ಡಾ.ಹುಲಿಕಲ್ ನಟರಾಜ್ ಅವರು ಪರಿತ್ತಿನ ಧ್ವಜಾರೋಹಣ ಮಾಡಲಿದ್ದಾರೆ.

ಬೆಳಗ್ಗೆ 10.30 ಕ್ಕೆ ನಡೆಯುವ ಸಮ್ಮೇಳನದ ಸಾನಿಧ್ಯವನ್ನು ಬೈಲೂರಿನ ನಿಜಗುಣಾನಂದ ಸ್ವಾಮಿಗಳು, ಗುರುಮಠಕಲ್ ನ ಖಾಸಾಮಠದ ಸ್ವಾಮಿಗಳು ಮತ್ತು ಚಿಗರಹಳ್ಳಿ ಸ್ವಾಮಿಗಳು ವಹಿಸುವರು. ಸಚಿವ ಶರಣಬಸಪ್ಪ‌ ದರ್ಶನಾಪುರ ಉದ್ಘಾಟಿಸುವರು, ಸಚಿವ ಸತೀಶ್ ಜಾರಕಿಹೊಳಿ ಅವರು ಹುಲಿಕಲ್ ನಟರಾಜ ಅವರ ಆರು ಸಂಪುಟ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಡಾ.ಎ.ಎಸ್.ಕಿರಣಕುಮಾರ ಅವರು ವಿಜ್ಞಾನ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಚಿವ ಬೋಸರಾಜ್ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ಪ್ರಮಾಣ ವಚನ ಬೋಧಿಸುವರು, ಶಾಸಕ ಶರಣಗೌಡ ಕಂದಕೂರ ಅವರು ಕ್ಯಾಲೆಂಡರ್ ಬಿಡುಗಡೆ ಮಾಡುವರು, ಶಾಸಕ ರಾಜಾ ವೇಣುಗೋಪಾಲ ನಾಯಕ ದಿನಚರಿ ಬಿಡುಗಡೆ ಮಾಡುವರು, ಸಂಸದರಾದ ಜಿ.ಕುಮಾರ ನಾಯಕ್ ಮತ್ತು ರಾಧಾಕೃಷ್ಣ ದೊಡ್ಡಮನಿ ಅವರು ಜೀವಮಾನ ಸಾಧನಾ ಮತ್ತು ವಿಶಿಷ್ಟ ಸೇವಾ ಪ್ರಶಸ್ತಿಗಳು ಪ್ರದಾನ ಮಾಡಲಿದ್ದಾರೆ.

ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಅಧ್ಯಕ್ಷರ ಮಾತುಗಳು ಆಡಲಿದ್ದಾರೆ.

ಅಂದು ಮಧ್ಯಾಹ್ನ 2ಕ್ಕೆ ನಡೆಯುವ ಗೋಷ್ಠಿಯಲ್ಲಿ ಸಂವಿಧಾನ ಸಂವೇದನೆ ಮತ್ತು ಕಂದಾಚಾರದ ಸುಳಿಯೊಳಗೆ ವಿಷಯ ಕುರಿತು ಅನುಭಾವಿಗಳು ಮಾತನಾಡಲಿದ್ದಾರೆ. ಡಾ.ವಿಜಯ ಪ್ರಕಾರ ಮತ್ತು ರವಿ ಪಾಟೀಲ್ ಸೇರಿದಂತೆಯೇ ಇತರರು ಭಾಗವಹಿಸಲಿದ್ದಾರೆ.

ಸಂಜೆ 4ಕ್ಕೆ ನಡೆಯುವ ಗೋಷ್ಠಿಯಲ್ಲಿ ಎ.ಐ ಏನು ಮಾಯಾವೋ ಮತ್ತು ಮೌಢ್ಯತೆಯ ಹೊರದೂಡಲು ಬನ್ನಿ ಎಂಬ ವಿಷಯಗಳ ಕುರಿತು ಪರಣಿತರು ಮಾತನಾಡಲಿದ್ದಾರೆ.

ಸಂಜೆ 6 ಕ್ಕೆ ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರೊಂದಿಗೆ ಸಂವಾದ ನಡೆಯಲಿದೆ. ಮೊದಲ ದಿನದ ಈ ಮೂರು ಗೋಷ್ಠಿಗಳಲ್ಲಿ ನಾಡಿನ ವಿವಿಧ ಜಿಲ್ಲೆಗಳ ಅನೇಕರು ಭಾಗವಹಿಲಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News