×
Ad

ಯಾದಗಿರಿ | ಬಡ ಕಾರ್ಮಿಕರ ಮಕ್ಕಳ ಶಾಲಾ ಶುಲ್ಕವನ್ನು ಸರಕಾರ ಭರಿಸಲು ಒತ್ತಾಯ

Update: 2024-12-17 21:00 IST

ಯಾದಗಿರಿ : ಖಾಸಗಿ ಶಾಲೆಗಳಲ್ಲಿ ಕಾರ್ಮಿಕರ ಮಕ್ಕಳಿಗೆ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರ ಕಾರ್ಮಿಕರ ಮಕ್ಕಳ ಶುಲ್ಕ ಭರಿಸಿ ಓದಲು ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಶ್ರಮಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಯೂನಿಯನ್ ಸುರಪುರ ತಾಲ್ಲೂಕು ಘಟಕದಿಂದ ತಹಶೀಲ್ಧಾರ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರ ದಿಂದ ಪರವಾನಿಗೆ ಪಡೆದಿರುವ ಖಾಸಗಿ ಶಾಲೆಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಇಂತಹ ಶಾಲೆಗಳಲ್ಲಿ ಕಲಿಸಲು ಸಾಧ್ಯವಾಗುತ್ತಿಲ್ಲ, ಇಂತಹ ಮಕ್ಕಳ ಶುಲ್ಕ ಸರಕಾರ ಭರಿಸಬೇಕೆಂದು ಒತ್ತಾಯಿಸಿ ಕೇಂದ್ರ ಸರಕಾರದ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೈಯದ್ ಹಾಫಿಜುರ್ ರೆಹಮಾನ್, ಉಪಾಧ್ಯಕ್ಷ ವಿರೇಶ ರುಮಾಲ, ಕಾರ್ಯದರ್ಶಿ ಮುಹಮ್ಮದ್‌ ಹುಸೇನ ಶಕ್ಲಿ, ಮುಹಮ್ಮದ್‌ ರಫೀಕ್, ಗೌಸುದ್ದಿನ್ ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News