×
Ad

ಯಾದಗಿರಿ | ಹುಲಿಕಲ್ ಕೆ. ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ

Update: 2024-11-23 19:30 IST

ಯಾದಗಿರಿ : ಶಹಾಪುರ ತಾಲೂಕಿನ ಹುಲಿಕಲ್ ಕೆ. ಗ್ರಾಮದ ಹಳ್ಳದಲ್ಲಿ ನೀರು ಖಾಲಿ ಆಗಿರುವ ಹಿನ್ನಲೆ ಮೊಸಳೆಯೊಂದು ಜಮೀನಿನಲ್ಲಿ ಪ್ರತ್ಯಕ್ಷವಾಗಿದ್ದು, ಭಯ ಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಮೊಸಳೆಗೆ ಹಗ್ಗದ ಬಲೆ ಹಾಕಿ ಮೊಸಳೆ ಸೆರೆದಿಡಿದು ರಕ್ಷಣೆ ಮಾಡಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನದಲ್ಲಿ ಮೊಸಳೆಯನ್ನು ನಾರಾಯಣಪುರ ಜಲಾಶಯದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಕಾಶಪ್ಪ ತಿಳಿಸಿದ್ದಾರೆ.

ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸಹಕಾರಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News