×
Ad

ಯಾದಗಿರಿ | ಖಾನಾಪುರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ

Update: 2024-12-02 18:34 IST

ಯಾದಗಿರಿ : ಇಲ್ಲಿನ ಖಾನಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ನರಸಪ್ಪ ಬರೇಗಲ್ ಮತ್ತು ಉಪಾಧ್ಯಕ್ಷರಾಗಿ ವಿಜಯಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಸನ್ಮಾನಿಸಿದರು.

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಜನರ ನಿರೀಕ್ಷೆಯಂತೆ ಸೇವೆ ಸಲ್ಲಿಸಿ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ ಜನರ ಪ್ರೀತಿಗೆ ಪಾತ್ರರಾಗಿ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಹಿರಿಯ ಮುಖಂಡರಾದ ರಾಚಣಗೌಡ ಮುದ್ದಾಳ, ಮಹೇಶದರಡ್ಡಿ ಮುದ್ದಾಳ, ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಸಿದ್ದಣಗೌಡ ವಡಗೇರಾ, ಬಸವರಾಜಪ್ಪ ವಿಭೂತಿಹಳ್ಳಿ, ಗುರು ಕಾಮಾ, ರಾಮಲಿಂಗಪ್ಪ ಕೊಂಚೆಟ್ಟಿ, ಪರಶುರಾಮ ಕುರುಕುಂದಾ, ಸಿದ್ದಣಗೌಡ ತಂಗಡಗಿ, ಗೋವಿಂದಪ್ಪ ಕೊಂಚೆಟ್ಟಿ, ಸೋಮಸಿಂಗ್, ಭೀಮರಾಯ ಹೊಸ್ಮನಿ, ರಂಗಪ್ಪ ಕೊಂಚೆಟ್ಟಿ, ಇಂದ್ರಜೀತ್, ಬಾಲು, ಮರಿಲಿಂಗಪ್ಪ ಕೊಂಚೆಟ್ಟಿ, ಶಿವನ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಮತ್ತು ಖಾನಾಪೂರ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News