×
Ad

ಯಾದಗಿರಿ | ವಕ್ಫ್ ವಿರುದ್ಧ ಡಿ.5 ರಂದು ಶಹಾಪುರಲ್ಲಿ ಪ್ರತಿಭಟನೆ : ಅಮೀನರೆಡ್ಡಿ ಪಾಟೀಲ್

Update: 2024-12-03 17:16 IST

ಯಾದಗಿರಿ : ವಕ್ಫ್ ವಿರುದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಡಿ.5 ರಂದು ( ಗುರುವಾರ) ಶಹಾಪುರಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ಹೇಳಿದ್ದಾರೆ.

ಜಿಲ್ಲಾ ಪತ್ರಿಕಾಭವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತರ ಹಾಗೂ ಮಠಗಳ ಆಸ್ತಿಗಳನ್ನು ವಕ್ಫ್ ಹೆಸರಿಗೆ ವರ್ಗಾಯಿಸಲಾಗಿದೆ. ಇದರ ವಿರುದ್ದ ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ಅದರ ಅಂಗವಾಗಿ ಬೀದರ್ ನಿಂದ ಬೆಂಗಳೂರಿನವರೆಗೆ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

ಶಹಾಪುರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಗುವುದು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು, ಮಠಾಧೀಶರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಡಾ.ಶರಣಭೂಪಾಲ ರೆಡ್ಡಿ, ಮಹೇಶ ರೆಡ್ಡಿ ಮುದ್ನಾಳ್, ಗುರುಕಾಮಾ, ಲಿಂಗಪ್ಪ ಹತ್ತಿಮನಿ, ದೇವೆಂದ್ರನಾಥ ನಾದ್, ತಿರುಪತಿ ರೆಡ್ಡಿ ಹಾಗೂ ಚಂದ್ರು ಕಡೇಚೂರು ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News