×
Ad

ಯಾದಗಿರಿ | 80 ಲೀಟರ್ ಕಲಬೆರಕೆ ಸೇಂದಿ ಜಪ್ತಿ: ಮೂವರ ಬಂಧನ

Update: 2024-11-09 20:01 IST

ಯಾದಗಿರಿ: ಇಲ್ಲಿನ ಸೈದಾಪುರ ಗ್ರಾಮದ ಟೀನ್ ಶೆಡ್‌ನಲ್ಲಿ ಆಕ್ರಮವಾಗಿ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆಯ ಶಹಾಪುರ ಉಪ ವಿಭಾಗದ ಉಪ ಅಧೀಕ್ಷಕ ನೇತೃತ್ವದಲ್ಲಿ ದಾಳಿ ನಡೆಸಿ, 80 ಲೀಟರ್ ಕಲಬೆರಕೆ ಸೇಂದಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೈದಾಪುರ ಗ್ರಾಮದ ಸೀತಾರಾಮ್ ಅಲಿಯಾಸ್ ಸಿದ್ದಪ್ಪ ಚವ್ಹಾಣ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಟೀನ್ ಶೆಡ್ ಒಂದರಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ್ದ 80 ಲೀಟರ್ ಕಲಬೆರಕೆ ಸೇಂದಿ ದಾಳಿ ವೇಳೆ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ 3 ಜನ ಆರೋಪಿಗಳ ವಿರುದ್ಧ ಶಹಾಪುರ ಅಬಕಾರಿ ನಿರೀಕ್ಷಕರ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News