×
Ad

ಯಾದಗಿರಿ: ಪಿಕಪ್ ವಾಹನ ಪಲ್ಟಿ; ಕಾರ್ಮಿಕ ಮಹಿಳೆ ಮೃತ್ಯು,12ಕ್ಕೂ ಹೆಚ್ಚು ಮಂದಿಗೆ ಗಾಯ

Update: 2024-11-18 12:46 IST

ಯಾದಗಿರಿ: ಕಾರ್ಮಿಕರನ್ನು ಕೆಲಸಕ್ಕೆ  ಕರೆದೊಯ್ಯುತ್ತಿದ್ದ  ಪಿಕಪ್ ವಾಹನ ಪಲ್ಟಿಯಾಗಿ ಓರ್ವ ಕಾರ್ಮಿಕ ಮಹಿಳೆ ಮೃತಪಟ್ಟದ್ದು,12 ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ಗುರುಮಠಕಲ್ ತಾಲೂಕಿನ ಧರ್ಮಾಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟಕಲ್ ನಿವಾಸಿ ಮೊಗಲಮ್ಮ (22) ಮೃತ ಮಹಿಳೆ. ಹತ್ತಿ ಕೃಷಿಯ ಕೆಲಸಕ್ಕೆ ಕಾರ್ಮಿಕರನ್ನು ಪಿಕಪ್ ವಾಹನದಲ್ಲಿ ಕರೆದೊಯ್ಯುತ್ತಿದ್ದ  ವೇಳೆ ಈ ಅವಘಡ ಸಂಭವಿಸಿದೆ.

ಗಾಯಗೊಂಡ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಹಾಗೂ ರಾಯಚೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News