×
Ad

ಯಾದಗಿರಿ | ಸರಕಾರಿ ಜಮೀನು ಒತ್ತುವರಿ ತಡೆಯಲು ವೆಂಕಟೇಶ ಅಮ್ಮಾಪುರಕರ್ ಆಗ್ರಹ

Update: 2024-11-27 20:41 IST

ಯಾದಗಿರಿ : ಸುರಪುರ ನಗರದ ರಂಗಂಪೇಟೆಯ ಸರ್ವೇ ನಂಬರ್ 1ರಲ್ಲಿನ ಸರಕಾರಿ ಜಮೀನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು ಕೂಡಲೇ ಇದನ್ನು ತಡೆಯುವಂತೆ ಸಾಮಾಜಿಕ ಕಾರ್ಯರ್ತ ವೆಂಕಟೇಶ ಬಿ.ಅಮ್ಮಾಪುರಕರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಬಳಿಯಲ್ಲಿನ ಸರ್ವೇ ನಂಬರ್ 1ರಲ್ಲಿನ ಸರಕಾರದ 1ಎಕರೆ 9ಗುಂಟೆ ಜಮೀನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು,ಇದರ ಕುರಿತು ಈಗಾಗಲೇ ನಗರಸಭೆ, ತಹಶೀಲ್ದಾರರು, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹಿಂದೆ ಇದೇ ಒತ್ತುವರಿಯಾಗಿರುವ ಜಾಗದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯವಿತ್ತು, ಅದನ್ನು ನೆಲಸಮಗೊಳಿಸಲಾಗಿದೆ.

ಈಗ ಮಹಿಳೆಯರು ಬಹಿರ್ದೇಸೆಗೆ ಹೋಗಲು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಈ ಸ್ಥಳದ ಪರಿಶೀಲನೆ ಮಾಡಿ ಸರಕಾರದ ಜಾಗವನ್ನು ತಮ್ಮ ವಶಕ್ಕೆ ಪಡೆದು ಪುನಃ ಮಹಿಳಾ ಶೌಚಾಲಯ ನಿರ್ಮಾಣ ಮಾಡುವ ಜೊತೆಗೆ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೇಡಿಕೆ ಈಡೇರಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿದ್ರಾಮ ಎಲಿಗಾರ ಇದ್ದರು.Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News