×
Ad

ಯಾದಗಿರಿ | ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಜಿಲ್ಲಾ ಪ್ರವಾಸ

Update: 2025-05-31 20:28 IST

ಯಾದಗಿರಿ: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ  ಶರಣಬಸಪ್ಪ ದರ್ಶನಾಪೂರ ಅವರು ಜೂನ್1ರಿಂದ ಜೂನ್‌3ರವರೆಗೆ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಶಹಾಪುರಗೆ ತೆರಳಿ ಬಿ.ಬಿ.ರಸ್ತೆ ಸಿ.ಬಿ.ಕಾಂಪ್ಲೆಕ್ಸ್‌ನಲ್ಲಿ ಶರಣ ಬಸವ ಆಸ್ಪತ್ರೆ ಮತ್ತು ಅದ್ವಿಕಾ ಫಾರ್ಮಸಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವರು. ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ತೆರಳಲಿದ್ದಾರೆ.

ಜೂನ್ 2ರಂದು ಬೆಳಿಗ್ಗೆ10.30ಕ್ಕೆ ಸನ್ನತಿ ಬ್ಯಾರೇಜ್‌ಗೆ ತೆರಳಿ ಶಾಶ್ವತ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶಹಾಪುರಗೆ ತೆರಳಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತದನಂತರ ಸಂಜೆ 5 ಗಂಟೆಗೆ ಕಲಬುರಗಿಗೆ ಪ್ರಯಾಣ ಬೆಳೆಸಲಿದ್ದಾರೆ.

ಜೂನ್ 3ರಂದು ಬೆಳಿಗ್ಗೆ ಸಚಿವರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಕಲಬುರಗಿಗೆ ಪ್ರಯಾಣ ಬೆಳೆಸಲಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News