ಯಾದಗಿರಿ | ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳಿಂದ ದಾಳಿ
ಸುರಪುರ: ನಗರದ ವೆಂಕಟಾಪುರ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿನ ನಕಲಿ ವೈದ್ಯರ ಕ್ಲಿನಿಕ್ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಕ್ಲಿನಿಕ್‌ಗಳನ್ನು ಸೀಝ್ ಮಾಡಿರುವ ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ನಗರದ ವೆಂಕಟಾಪುರದಲ್ಲಿನ ಮಹೇಂದ್ರನಾಥ ಬೆಂಗಾಳಿ ಎನ್ನುವ ನಕಲಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ ನಡೆಸಿದರು. ಕವಡಿಮಟ್ಟಿ ಗ್ರಾಮದಲ್ಲಿನ ನಕಲಿ ವೈದ್ಯ ಪ್ರದೀಪ ಬಾಲ ಬೆಂಗಾಳಿ ಹಾಗೂ ವಾಗಣಗೇರಾ ಗ್ರಾಮದಲ್ಲಿನ ನಕಲಿ ವೈದ್ಯ ಉತ್ತಮ ಕುಮಾರ ಅವರ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಾರೆ.
ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ಮಾತನಾಡಿ, ನಕಲಿ ವೈದ್ಯರ ಕುರಿತು ಮಾಹಿತಿ ತಿಳಿದು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಅಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವವರಿಗೆ ಯಾವುದೇ ವಿದ್ಯಾರ್ಹತೆ ಇಲ್ಲ. ಅಲ್ಲದೆ ಕೆಪಿಎಮ್‌ಇ ವತಿಯಿಂದ ಪರವಾನಿಗೆ ಪಡೆದಿಲ್ಲ ಎನ್ನುವುದು ತಿಳಿದು ಬಂದಿದೆ. ಆದ್ದರಿಂದ ಮೂರು ಕ್ಲಿನಿಕ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.