ಯಾದಗಿರಿ | ಸೆ.10ರಂದು ಬಂಜಾರ ಸಮಾಜದಿಂದ ಬೃಹತ್ ಪ್ರತಿಭಟನೆ
ಯಾದಗಿರಿ: ಪ್ರಸ್ತುತ ರಾಜ್ಯ ಸರಕಾರ ನೀಡಿರುವ ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯದಕ್ಕೆ ಅನ್ಯಾಯವಾಗಿದ್ದು ಕೂಡಲೇ ಸರಕಾರ ಮರು ಪರಿಶೀಲನೆ ನಡೆಸಿ ಬಂಜಾರ ಸಮುದಾಯದಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೇವರಾಜ ನಾಯಕ ಉಳ್ಳೆಸೂಗುರು ಹೇಳಿದ್ದಾರೆ.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದೇವರಾಜ ನಾಯಕ, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಬಂಜಾರ, ಕೊಂಚ , ಕೊರಮ, ಭೋವಿ ಸಮುದಾಯದಕ್ಕೆ ಒಳಮೀಸಲಾತಿಯಲ್ಲಿ ಶೇ 4.1/2 ಹಂಚಿಕೆ ಒದಗಿಸಿತ್ತು. ಅದರೆ ಪ್ರಸ್ತುತ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೊಂಚ, ಕೊರಮ, ಭೋವಿ, ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದೆ. ಈ ಮೀಸಲಾತಿ ಹಂಚಿಕೆಯಲ್ಲಿ ಶೇ 6 % ಹಂಚಿಕೆ ನೀಡುವಂತೆ ಸೆಪ್ಟೆಂಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಸಮಾಜದ ಎಲ್ಲಾ ಮುಖಂಡರು, ಹಿರಿಯ ನಾಗರಿಕರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಬಂಗಾರು ರಾಠೋಡ್, ಜನಾರ್ಧನ ರಾಠೋಡ್ ಅಲಿಪುರ, ಸುನೀತಾ ಚವ್ಹಾಣ , ಮನೋಹರ್ ಪವಾರ್, ಮೇಘನಾಥ್ ಚವ್ಹಾಣ, ರವಿ ಮುದ್ನಾಳ, ಸಂತೋಷ್ ಚಾಮನಳ್ಳಿ ತಾಂಡಾ, ವಿಜಯ್ ಜಾಧವ್, ವಿಕಾಸ್ ಚವ್ಹಾಣ, ಗೋವಿಂದ ನಾಲಡಗಿ, ಗೋಪಾಲ ಗೌಡಗೆರಾ , ವಿಜಯ್ ವರ್ಕನಳ್ಳಿ ಉಪಸ್ಥಿತರಿದ್ದರು.