×
Ad

ಬಿಲ್ಲವರು-ಮೊಗವೀರರು ಒಂದಾಗಬೇಕು: ನಾಡೋಜ ಡಾ.ಜಿ.ಶಂಕರ್

Update: 2025-10-19 19:02 IST

ಮಂಗಳೂರು, ಅ.19: ಬಿಲ್ಲವರು ಮತ್ತು ಮೊಗವೀರ ಸಮಾಜ ರಾಜಕೀಯ ರಹಿತವಾಗಿ ಒಂದಾಗಬೇಕು. ಬಿಲ್ಲವ ಮತ್ತು ಮೊಗವೀರ ಸಮಾಜದ ನಡುವೆ ರಾಜಕೀಯ ಪ್ರಜ್ಞೆಯ ಕೊರತೆಯಿಂದ ಬಿಲ್ಲವ ಸಮಾಜದ ಅಭ್ಯರ್ಥಿಗಳು ಚುನಾವಣೆ ನಿಂತಾಗ ಮೊಗವೀರ ಸಮಾಜ ಸ್ಪಂದಿಸಲಿಲ್ಲ ಅದೇ ರೀತಿ ಮೊಗವೀರ ಸಮಾಜ ಚುನಾವಣೆಗೆ ನಿಂತಾಗ ಬಿಲ್ಲವ ಸಮಾಜ ಸ್ಪಂದಿಸಲಿಲ್ಲ. ಇದರಿಂದಾಗಿ ಬಿಲ್ಲವ ಮತ್ತು ಮೊಗವೀರ ಸಮಾಜಕ್ಕೆ ಸರಿಯಾದ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಇದರಿಂದ ಸಮಾಜದ ಅಭಿವೃದ್ಧಿಗೆ ತೊಂದರೆ ಆಗುತ್ತದೆ. ಮುಂದಿನ ದಿನಗಳಲ್ಲಿ ಬಿಲ್ಲವ ಮತ್ತು ಮೊಗವೀರ ಸಮಾಜದ ವ್ಯಕ್ತಿಗಳು ಯಾವುದೇ ಪಕ್ಷದಲ್ಲಿ ನಿಂತರೂ ಪಕ್ಷ ಭೇದ ಮರೆತು ಒಂದಾಗ ಬೇಕು ಎಂದು ಮೊಗವೀರ ರತ್ನ, ನಾಡೋಜ ಡಾ. ಜಿ. ಶಂಕರ್ ಕರೆ ನೀಡಿದರು.

ಮಂಗಳೂರು ದಸರಾದ ಗೌರವ ಸಮ್ಮಾನ್ 2025 ಪ್ರಶಸ್ತಿ ಸ್ವೀಕರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿದ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ವಂದಿಸಿದ ಬಳಿಕ ಮಾತನಾಡಿದರು.

ಈ ಸಂದರ್ಭ ಕ್ಷೇತ್ರದ ಅಧ್ಯಕ್ಷ ಜಯರಾಜ್ ಸೋಮಸುಂದರಂ, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಕಿಶೋರ್ ದಂಡಕೇರಿ, ಕೃತಿನ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಚಂದನ್‌ದಾಸ್, ಲೀಲಾಕ್ಷ ಕರ್ಕೇರ, ರಮಾನಾಥ ಕಾರಂದೂರು, ರಾಧಾಕೃಷ್ಣ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಅಧ್ಯಕ್ಷ ಜಯ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News