×
Ad

ಬಿಂದು ಜ್ಯುವೆಲ್ಲರಿ ಮಂಗಳೂರು ಶಾಖೆ ಶುಭಾರಂಭ

Update: 2025-10-19 20:01 IST

ಮಂಗಳೂರು, ಅ.19: ಕೇರಳ ಮತ್ತು ಕರ್ನಾಟಕದಲ್ಲಿ ಕಾರ್ಯಚರಿಸುತ್ತಿರುವ ಬಿಂದು ಜ್ಯುವೆಲ್ಲರಿಯ ಮಂಗಳೂರು ಶಾಖೆಯು ನಗರದ ಬೆಂದೂರ್‌ನಲ್ಲಿ ರವಿವಾರ ಕಾರ್ಯರಂಭಗೊಂಡಿತು.

ಬಹುಭಾಷಾ ನಟಿ ಸ್ನೇಹಾ ಪ್ರಸನ್ನ ಶೋರೂಮ್ ಉದ್ಘಾಟಿಸಿ, ತಾನು ಮಂಗಳೂರಿಗೆ ಪ್ರಥಮ ಬಾರಿಗೆ ಆಗಮಿಸಿದ್ದು, ನಗರ ಸುಂದರವಾಗಿದೆ. 40 ವರ್ಷಗಳ ಪರಂಪರೆಯ ಬಿಂದು ಜ್ಯುವೆಲ್ಲರಿಯ ಶಾಖೆ ಉದ್ಘಾಟಿಸಲು ಹೆಮ್ಮೆಯಾಗಿದೆ. ಸ್ಥಾಪಕರ ಪರಿಶ್ರಮ, ಉತ್ತಮ ಗುಣಮಟ್ಟ ಮತ್ತು ಬದ್ಧತೆಯ ಸೇವೆಯಿಂದ ಬಿಂದು ಜ್ಯುವೆಲ್ಲರಿ ಅಭಿವೃದ್ಧಿಯಾಗಿದೆ. ಈ ಉದ್ಯಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಸುವರ್ಣ ಬಿಂದು: ಮಹಿಳಾ ಸಬಲೀಕರಣದ ಸಿಎಸ್‌ಆರ್ ಚಟುವಟಿಕೆ ‘ಸುವರ್ಣ ಬಿಂದು’ ಬಿಡುಗಡೆ, ‘ಮೈ ಬ್ಲೂ ಡೈಮಂಡ್’ ಐಷಾರಾಮಿ ಬ್ರ್ಯಾಂಡ್‌ನ್ನು ನಟಿ ಸ್ನೇಹಾ ಪ್ರಸನ್ನ ಅನಾವರಣಗೊಳಿಸಿದರು.

ಉದ್ಘಾಟನೆಯ ಸುಸಂದರ್ಭದಲ್ಲಿ ಪ್ರತೀ ಆಭರಣ ಖರೀದಿಗೆ ಆಕರ್ಷಕ ಉಡುಗೊರೆ , ಪ್ರತೀ ಕ್ಯಾರೆಟ್ ವಜ್ರದ ಮೇಲೆ 5000 ರೂ. ರಿಯಾಯಿತಿ, ಮೇಕಿಂಗ್ ಚಾರ್ಜಸ್ ಮೇಲೆ ಶೇ.30 ರಿಯಾಯಿತಿ, ಅದೃಷ್ಟವಂತ ಗ್ರಾಹಕರಿಗೆ ಕಾರು ಬಂಪರ್ ಬಹುಮಾನವನ್ನು ಬಿಂದು ಜುವೆಲ್ಲರಿ ಇದೇ ಸಂದರ್ಭದಲ್ಲಿ ಘೋಷಿಸಿದೆ.

ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಚಿನ್ನದ ಪರಿಶುದ್ಧತೆಯ ಬದ್ಧತೆಯೊಂದಿಗೆ ನವನವೀನ ವಿನ್ಯಾಸ ಒದಗಿ ಸುವ ಮೂಲಕ ಅವರ ವಿಶ್ವಾಸ ಗಳಿಸಿದೆ. ಹೊಸ ಶಾಖೆಯಲ್ಲಿಯೂ ಬಿಂದು ಜುವೆಲ್ಲರಿಯಿಂದ ‘ಅಕ್ಷಯ ನಿಧಿ’ ಮತ್ತು ‘ಸ್ವರ್ಣ ಬಿಂದು’ ಮಾಸಿಕ ಉಳಿತಾಯ ಯೋಜನೆ ಇದೆ ಎಂದು ಜುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ಅಭಿಲಾಷ್ ಕೆ.ವಿ.ಮತ್ತು ಡಾ.ಅಜಿತೇಶ್ ಕೆ.ವಿ ಮಾಹಿತಿ ನೀಡಿದ್ದಾರೆ.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜಿ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ವೈ., ಕರ್ನಾಟಕ ರಾಜ್ಯ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಅಲಿ ಫರೀದ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

ಬಿಂದು ಜುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕರಾದ ಅಭಿಲಾಷ್ ಕೆ.ವಿ., ಡಾ.ಅಜಿತೇಶ್ ಕೆವಿ , ಅವರ ಮಾತೃಶ್ರೀ ಶೋಭನಾ, ಸಿನಿಮಾ ನಟರಾದ ಶೋಧನ್ ಶೆಟ್ಟಿ, ಅನೀಶ್ ಮತ್ತಿತರರು ಉಪಸ್ಥಿತರಿದ್ದರು.

ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News