ಯುನಿವೆಫ್ ವತಿಯಿಂದ ಇಫ್ತಾರ್ ಸ್ನೇಹ ಮಿಲನ
Update: 2026-03-08 19:52 IST
ಮಂಗಳೂರು, ಮಾ.8: ಯುನಿವೆಫ್ ಕರ್ನಾಟಕ ಇದರ ಮಂಗಳೂರು ಮತ್ತು ಕುದ್ರೋಳಿ ಶಾಖೆಯ ಜಂಟಿ ಆಶ್ರಯದಲ್ಲಿ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮವು ನಗರದ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಚಾವಡಿ ಚರ್ಚೆಯಲ್ಲಿ ಡಾ.ಜೆ.ಎನ್. ಭಟ್, ಬಲ್ಮಠ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ.ಎಚ್.ಎಂ.ವಾಟ್ಸನ್, ನ್ಯಾಯವಾದಿ ಅಬ್ದುಲ್ ಅಝೀಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ರಮಝಾನ್ ಉಪವಾಸ, ಇಫ್ತಾರ್ ಬಗ್ಗೆ ಸಂದೇಶ ನೀಡಿದರು.
ಮುಹಮ್ಮದ್ ನಬೀಲ್ ಶಾಬಾನ್ ಕಾರ್ಯಕ್ರಮ ನಿರೂಪಿಸಿದರು. ಸಯೀದ್ ಅಹ್ಮದ್ ಕಿರಾಅತ್ ಪಠಿಸಿದರು.