×
Ad

ಫಳ್ಳೀರ್‌ನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ

Update: 2026-03-08 20:09 IST

ಮಂಗಳೂರು, ಮಾ.8: ಸಮಾಜದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ. ಬದುಕಿನುದ್ದಕ್ಕೂ ನಾನಾ ಜವಾಬ್ದಾರಿ, ಆನೇಕ ಸವಾಲು, ನೋವನ್ನು ಅನುಭವಿಸುವ ಹೆಣ್ಣು ಪ್ರೀತಿ, ಕ್ಷಮೆಯ ಪ್ರತೀಕವಾಗಿದ್ದಾಳೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಫಳ್ಳೀರ್ ಶಾಖೆಯ ಮುಖ್ಯಸ್ಥರಾದ ಹಫೀಝ್ ರಹಿಮಾನ್ ಹೇಳಿದ್ದಾರೆ.

ನಗರದ ಫಳ್ನೀರ್‌ನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ರವಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಎಲ್ಲ ರಂಗಗಳಲ್ಲೂ ಅನನ್ಯ ಸಾಧನೆ ಮಾಡಿದ್ದಾರೆ. ಮಹಿಳಾ ಸಬಳೀಕರಣ, ಆರೋಗ್ಯ , ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಸಂಸ್ಥೆಯು ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

ಲೇಡಿಸ್ ಕ್ಲಬ್‌ನ ಅಧ್ಯಕ್ಷೆ ನಯನಾ ಫೆರ್ನಾಂಡಿಸ್ ಮತ್ತು ಉಪಾಧ್ಯಕ್ಷೆ ಒಲಿವಿಯಾ ಪೆರೆರಾ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಧಕಿಯರಾದ ಪೌರ ಕಾರ್ಮಿಕೆ ಗಿರಿಜ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಅಧಿಕಾರಿ ಸವಿತಾ ಮೊನೀಸ್, ಬೆಳುವಾಯಿ ಸ್ಫೂರ್ತಿ ವಿಶೇಷ ಚೇತನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಫಾತಿಮತ್ ಸಹಲಾ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಪ್ರಮುಖರಾದ ನಝೀರ್ ಅಹ್ಮದ್, ಮ್ಯಾನೇಜರ್ ರಘುರಾಮ್, ಶೇಖ್ ಫರ್ಹಾನ್ ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

1993ರಲ್ಲಿ ಸ್ಥಾಪನೆಗೊಂಡಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮೆಂಡ್ಸ್ ಸಂಸ್ಥೆಯು ವಿಶ್ವದ ಅತೀ ದೊಡ್ಡ ಚಿನ್ನಾಭರಣ ಸಂಸ್ಥೆಗಳಲ್ಲಿ ಒಂದಾಗಿದೆ. ತನ್ನ ಉತ್ಪನ್ನಗಳಲ್ಲಿ ಶುದ್ಧತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡಿರುವ ಸಂಸ್ಥೆಯು 14 ದೇಶಗಳಲ್ಲಿ 410ಕ್ಕೂ ಅಧಿಕ ವಿಶ್ವದರ್ಜೆಯ ಶಾಖೆಗಳನ್ನು ಹೊಂದಿದೆ. ಆರೋಗ್ಯ ಶಿಕ್ಷಣ, ಆಹಾರ ಭದ್ರತೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ಸಿಎಸ್‌ಆರ್ ಫಂಡ್‌ನಿಂದ ಮಂಗಳೂರು ಶಾಖೆಯ ಮೂಲಕ 576 ಶಾಖೆಯ ಮೂಲಕ 48 ಲಕ್ಷ ರೂ. ಹಣವನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 












 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News