×
Ad

ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಇಫ್ತಾರ್ ಕೂಟ

Update: 2026-03-08 20:18 IST

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ಕೇಂದ್ರೀಯ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಇಫ್ತಾರ್ ಕೂಟ ಕಾರ್ಯಕ್ರಮವು ನಗರದ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಅಖಿಲ ಭಾರತ ಬ್ಯಾರಿ ಪರಿಷತ್ ಸ್ಥಾಪಕಾಧ್ಯಕ್ಷ ಜೆ.ಹುಸೈನ್ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷ ಯು.ಎಚ್.ಖಾಲೀದ್ ಉಜಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಲಿಮ್ರಾ ಎಜು ಗ್ರೂಪ್ ಆಫ್ ಕರ್ನಾಟಕದ ಅಧ್ಯಕ್ಷ ಶೇಖ್ ಮಹಮ್ಮದ್ ಇರ್ಫಾನಿ ಉಪವಾಸದ ಮಹತ್ವ, ಸತ್ಕರ್ಮಗಳು, ಡ್ರಗ್ಸ್ ಮಾಫಿಯಾ, ಪ್ಲಾಸ್ಟಿಕ್ ನಿಷೇಧದ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮ ದಲ್ಲಿ ಹಾಜಿ ಎಮ್.ಎಚ್ ಮೊಹಮ್ಮದ್ ಅಡ್ಡೂರು, ಮಾಜಿ ಕಾರ್ಪೊರೇಟರ್ ಲತೀಫ್ ಕಂದಕ್, ಟಿ.ಎಮ್.ಶಹೀದ್ ಸುಳ್ಯ,ಡಾ.ಸಿದ್ದೀಕ್ ಅಡ್ಡೂರು, ರಫೀಕ್ ಮಾಸ್ಟರ್, ಹುಸೈನ್ ಕಾಟಿಪಳ್ಳ, ಎನ್.ಇ.ಮಹಮ್ಮದ್ , ಮೇಲ್ತೆನೆ ಅಧ್ಯಕ್ಷ ರಿಯಾಝ್ ಮಂಗಳೂರು, ಎಸ್ ಕೆ ರಫೀಕ್, ನಲಪ್ಪಾಡ್ ಅಧ್ಯಕ್ಷ ಆಸೀಫ್ ಖಾನ್, ಹಮೀದ್ ಉಜಿರೆ, ರಝಾಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ನಿಸಾರ್ ಮುಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News