×
Ad

ಉಪ್ಪಿನಂಗಡಿ| ಕಾರು ಢಿಕ್ಕಿ; ಬೈಕ್‌ ಸವಾರ ಮೃತ್ಯು

Update: 2026-03-08 21:08 IST

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34 ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ಬೈಕೊಂದಕ್ಕೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಪದ್ಮುಂಜ ಸಹಕಾರಿ ಸಂಘದ ಹಿರಿಯ ಗುಮಾಸ್ತ ಚಿದಾನಂದ ಗೌಡ (56) ಎಂಬವರು ಸಾವನ್ನಪ್ಪಿದ ಘಟನೆ ರವಿವಾರ ಸಂಭವಿಸಿದೆ.

ಬಂದಾರು ಗ್ರಾಮದ ಕುರಾಯ ನಿವಾಸಿಯಾಗಿರುವ ಚಿದಾನಂದ ಗೌಡರವರು ಕಾರ್ಯನಿಮಿತ್ತ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಬೊಳ್ಳಾರ್ ಎಂಬಲ್ಲಿ ಕಾರೊಂದು ಡಿಕ್ಕಿ ಹೊಡೆಯಿತು. ಈ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ , ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉತ್ತಮ ಜನಸ್ನೇಹಿ, ಪರೋಪಕಾರಿ ಗುಣದೊಂದಿಗೆ ಜನಾನುರಾಗಿ ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪುತ್ತೂರು ಸಂಚಾರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News