×
Ad

ಪುರುಷರ, ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ; ಬ್ರದರ್ಸ್‌ ಅಗರಗುಡ್ಡೆ ಟೈಗರ್ಸ್ ಪ್ರಥಮ

Update: 2026-03-08 20:16 IST

ಮಂಗಳೂರು: ಗುರುಬ್ರಹ್ಮ ಫ್ರೆಂಡ್ಸ್ ಪುನರೂರು ದಿ .ಸುರೇಂದ್ರ ಪುನರೂರು ಸ್ಮರಣಾರ್ಥ ಅಂಗವಾಗಿ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ಮುಲ್ಕಿಯ ಪುನರೂರು ಶ್ರೀ ಬ್ರಹ್ಮಮುಗೇರ ದೇವಸ್ಥಾನ ವಠಾರದಲ್ಲಿ ನಡೆಯಿತು.

ಕ್ರೀಡಾ ಸ್ಫರ್ಧೆಯನ್ನು ಧರ್ಮಧರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಟೇಲ್ ವಾಸುದೇವ ರಾವ್, ಸುರೇಶ್ ರಾವ್, ಪಟೇಲ್ ವಿಶ್ವನಾಥ ರಾವ್ ,ಈಶ್ವರ್ ಕಟೀಲು, ಸುನೀಲ್ ಅಳ್ವ ,ಸ್ಟಾನಿ ಪಿಂಟೋ‌ ಕಿನ್ನಿಗೋಳಿ,ರಾಮಚಂದ್ರ ರಾವ್ ಎಸ್ ಕೋಡಿ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಪದ್ಮಲತಾ ರಾವ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಅವರನ್ನು ಗೌರವಿಸಲಾಯಿತು.

ಎರಡು ವಿಭಾಗಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು‌. ಪ್ರಥಮ ಸ್ಥಾನವನ್ನು ಬ್ರದಸ್೯ ಅಗರಗುಡ್ಡೆ ಟೈಗರ್ಸ್, ರನ್ನಸ್೯ ಅಗಿ ಜಾರಾಂದಯ ಅಶ್ವಥ್ ಪುರ ಪಡೆದುಕೊಂಡಿತು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News