ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ವತಿಯಿಂದ ಸ್ಥಾಪನಾ ದಿನಾಚರಣೆ
ಮಂಗಳೂರು: ಕ್ರೈಸ್ತ ವಂಶಾವಳಿ ತಿಳಿಯಲು ಚರ್ಚ್ ಗಳಲ್ಲಿ ದಾಖಲೆ ನೋಡಿದರೆ ಸಾಕು ಆದರೆ ಅದೊಂದು ಕುತೂಹಲಕಾರಿ ಕೆಲಸ ಎಂದು ವಂಶಾವಳಿ ತಜ್ಞ ಡಾ ಮೈಕಲ್ ಲೋಬೊ ಹೇಳಿದರು.
ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ರಿ ಇವರ 52ನೇ ವರ್ಷದ ಸ್ಥಾಪನಾ ದಿನದ ಪ್ರಯುಕ್ತ ಬಿಇಎಮ್ ಸ್ಕೂಲ್ ಕಾರ್‌ಸ್ಟ್ರೀಟ್ ಸಭಾಂಗಣದಲ್ಲಿ ತೌರೊ ಕುಟುಂಬದ ಸಹಯೋಗದೊಂದಿಗೆ ನಡೆದ ವಂಶಾವಳಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ವಜ್ರೋದ್ಯಮಿ ಎಸ್ ಎಲ್ ಪ್ರಶಾಂತ್ ಶೇಟ್ ಮಾತನಾಡಿ, ವಿಭಿನ್ನ ಕಾರ್ಯಕ್ರಮ ಮಾಡಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಕೊಂಕಣಿ ಜನರ ಅಗತ್ಯಗಳನ್ನು ಪೂರೈಸಲು ಹವಣಿಸುವುದು ನಿಜವಾದ ಕೆಬಿಎಂಕೆ ಉದ್ದೇಶದ ಈಡೇರಿಕೆಕಡೆಗೆ ಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿ ,ಕರ್ನಾಟಕ, ಕೇರಳ, ಗೋವ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊಂಕಣಿ ಭಾಷಾ ಮಂಡಳಗಳಿದ್ದು ಅವುಗಳ ಕೆಲಸ ಕೊಂಕಣಿ ಚಳುವಳಿ ಆಗಿದೆ. ಹಿಂದೆ ಅಕಾಡೆಮಿ ಆಗಲು, ಎಂಟನೇ ಪರಿಚ್ಛೇದ ಮಾನ್ಯತೆ ಸಿಗಲು ಹೋರಾಟ ನಡೆಸಿದ್ದೆವು ಎಂದರು.
ಮುಖ್ಯ ಅತಿಥಿ ಆಗಿದ್ದ ಜೋನ್ ಎ ತಾವ್ರೊ ಕಾಮತ್ ಶುಭಹಾರೈಸಿದರು. ತೌರೊ ಒಂದು ವಂಶಾವಳಿ ಬಗ್ಗೆ ಸಂಶೋಧನೆ ಮಾಡಿದ ನೊಯೆಲ್ ತಾವ್ರೊ ಅದರ ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೆ ಬಂದ ಕುತೂಹಲಕರ ಜನರು ವಂಶಾವಳಿ ಬಗ್ಗೆ ತಮ್ಮ ಅನುಭವ ಮತ್ತು ಮಾಹಿತಿ ಹಂಚಿಕೊಂಡರು. ಖಜಾಂಜಿ ವಸಂತ ರಾವ್ ಮತ್ತು ಗೀತಾ ಸಿ ಕಿಣಿ,ಜೂಲಿಯೆಟ್ ಫರ್ನಾಂಡೀಸ್ ಪ್ರಶ್ನೋತ್ತರ ನಡೆಸಿಕೊಟ್ಟರು.
ಉಪಾಧ್ಯಕ್ಷ ಮೀನಾಕ್ಷಿ ಎನ್ ಪೈ ಮತ್ತು ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಸ್ಟೇನಿ ತೌರೊ ಸಮಾರೋಪ ಭಾಷಣ ಮಾಡಿದರು. ಮೊದಲಿಗೆ ಕಾರ್ಯಕಾರಿ ಸದಸ್ಯ ರೊಬರ್ಟ್ ಮೆನೆಜಸ್ ಸ್ವಾಗತಿಸಿ, ಕಾರ್ಯದರ್ಶಿ ಲಿಸ್ಟನ್ ಡಿಸೋಜ ವಂದಿಸಿದರು. ಜೊಸ್ಸಿ ಪಿಂಟೊ ನಿರೂಪಿಸಿದರು.