×
Ad

ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ವತಿಯಿಂದ ಮಜ್ಜಿಸುನ್ನೂರ್, ಸಮಸ್ತ 100ನೇ ವರ್ಷಾಚರಣೆಯ ಪ್ರಚಾರ ಸಮ್ಮೇಳನ

Update: 2025-10-19 21:56 IST

ಮುಲ್ಕಿ: ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆಯ ವತಿಯಿಂದ 4ನೇ ವರ್ಷದ ಮಜ್ಜಿಸುನ್ನೂರ್ ಹಾಗೂ ಸಮಸ್ತ 100ನೇ ವರ್ಷಾಚರಣೆಯ ಪ್ರಚಾರ ಸಮ್ಮೇಳನವು ಶನಿವಾರ ಎಸ್ಕೆಎಸ್ಸೆಸ್ಸೆಫ್ ಮುಲ್ಕಿ ಕೊಲ್ನಾಡು ಶಾಖೆಯ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದ ಕೊಲ್ಪೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸ್ಹಾಕ್ ಫೈಝಿ ಕುಕ್ಕಿಲ ಅವರು, ಒಂದು ಊರಿನಲ್ಲಿ ಮಸೀದಿಗಳ ನಿರ್ಮಾಣಕಿಂತಲೂ‌ ಮುನ್ನ ಮದರಸಗಳ ನಿರ್ಮಾಣವಾಗಬೇಕು. ಆ ಮೂಲಕ ಊರಿನ‌ ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸ ನೀಡಿ ಮಸೀದಿಯ ಮಹತ್ವ, ಅದರಲ್ಲಿ‌ ಪಾಲಿಸಬೇಕಿರುವ ಬಾಧ್ಯತೆಗಳ ತಿಳಿಹೇಳುವ ಕೆಲಸವಾಗಬೇಕು. ಊರಿನ ಯುವಕರು ಒಳ್ಳೆಯವರಾದರೆ ಇಡೀ ಊರು ಒಳ್ಳೆಯದಾ ಗುತ್ತದೆ ಎಂದ ಅವರು, ಇಂದು ಲೋಕಾರ್ಪಣೆಗೊಂಡಿರುವ ಎಸ್ಕೆಎಸ್ಸೆಸ್ಸೆಫ್ ನ ಆ್ಯಂಬುಲೆನ್ಸ್ ಸರ್ವ ಧರ್ಮೀಯರೂ ಉಪಯೋಗಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭ ಎಸ್ಕೆಎಸ್ಸೆಸ್ಸೆಫ್‌ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷರಾದ ಅಸ್ಸಯ್ಯದ್ ಅಮೀರ್ ತಂಞಳ್ ಅಲ್ ಬುಖಾರಿ ಕಿನ್ಯಾ ಹಾಗೂ ಅಸ್ಪಯ್ಯದ್ ಇಬ್ರಾಹಿಂ ಬಾದುಶ ತಂಬಳ್ ಅಲ್ ಬುಖಾರಿ ಮುರ್ಶಿದಿ ಆನೆಕಲ್ಲು ಇವರ ನೇತೃತ್ವದಲ್ಲಿ ಮಜ್ಲಿಸುನ್ನೂರ್‌ ನಡೆಯಿತು. ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್‌ ಅವರು ದುವಾ ಆಶೀರ್ವಚನೆ ಗೈದರು. ಸಭಾ ಕಾರ್ಯಕ್ರಮಕ್ಕೂ ಮುನ್ನ‌‌ ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಉಸ್ಕಾನ್ ಫೈಝಿ ತೋಡಾರು ಅವರು ಕೊಲ್ನಾಡು ಯೂನಿಟ್‌ ನ ನೂತನ ಆಂಬುಲೆನ್ಸ್ ನ್ನು ಲೋಕಾರ್ಪಣೆಗೊಳಿಸಿದರು.

ಸಮಾರಂಭವನ್ನು ಮುಲ್ಕಿ ಕೊಲ್ನಾಡು ಶಾಫಿ ಜುಮಾ‌ ಮಸೀದಿಯ ಖತೀಬ್ ಶರೀಫ್ ದಾರಿಮಿ ಅಲ್ ಹೈತಮಿ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಬಶೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಗಾಗಿ ಹಗಲಿರುಳು ಶ್ರಮಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಸಮಸ್ತ ನೂರನೇ ವರ್ಷದ ಪೋಸ್ಟರ್‌ ಬಿಡುಗಡೆ ನಡೆಯಿತು.

ಸಮಾರಂಭದಲ್ಲಿ ಅಂಗರಗುಡ್ಡೆ ಬದ್ರಿಯಾ ಜುಮಾ ಮಸೀದಿಯ ಖತೀಬ್‌ ಜಾಫರ್‌ ಫೈಝಿ, ತ್ವಯ್ಯಿಬ್‌ ಫೈಝಿ, ಎಸ್ಕೆಎಸ್ಸೆಸ್ಸೆಫ್‌ ಕೊಲ್ನಾಡು ಶಾಖೆಯ ಗೌರವಾಧ್ಯಕ್ಷ ಎಂ.ಎಂ. ಬಾವಾ, ಮುಲ್ಕಿ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್‌, ಎಸ್ಕೆಎಸ್ಸೆಸ್ಸೆಫ್‌ ದ.ಕ. ವೆಸ್ಟ್ ಸಂಘಟನಾ ಕಾರ್ಯದರ್ಶಿ ಶಾಹುಲ್‌ ಹಮೀದ್‌ ಸೂರಿಂಜೆ, ಕರ್ನಾಟಕ ರಾಜ್ಯ ಸಹಚಾರಿ ಅಧ್ಯಕ್ಷ ಇಮ್ತಿಯಾಝ್‌ ಇಡ್ಯಾ, ಕೊಲ್ನಾಡ್‌ ಫ್ರೆಂಡ್ಸ್‌ ಅಧ್ಯಕ್ಷ ಇಮ್ರಾನ್‌ ಕೊಲ್ನಾಡ್‌, ಸಮಾಜ ಸೇವಕ ತೌಸೀಫ್‌ ಕೊಲ್ನಾಡ್‌, ಬ್ಲಡ್‌ ಹಲ್ಪ್‌ ಲೈನ್‌ ಕರ್ನಾಟಕ ಉಸ್ತುವಾರಿ ಅಝೀಝ್‌ ಕೊಲ್ನಾಡ್‌, ಬಾವಾಸ್‌ ಅಕಾಡೆಮಿಯ ಪ್ರಾಂಶುಪಾಲರಾದ ಯಾಸೀರ್‌ ಅರಾಫತ್‌, ಕೊಲ್ನಾಡು ಯುವಕ ವೃಂದ ಅಧ್ಯಕ್ಷ ಮುಹಮ್ಮದ್‌ ಅಲಿ, ಉದ್ಯಮಿಗಳಾದ ಎ.ಎಚ್.‌ ರಫೀಕ್‌, ಮುಝಮ್ಮಿಲ್‌, ಮುಹಮ್ಮದ್‌ ಸಾದೀಕ್‌ ಮೊದಲಾದವರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News