×
Ad

ನೇತ್ರಾವತಿ ಹಳೆ ಸೇತುವೆಯಲ್ಲಿ ದುರಸ್ತಿ ಕಾಮಗಾರಿ| ಮೇ 2ರಿಂದ ಸಂಚಾರಕ್ಕೆ ಮುಕ್ತ: ಅನುಪಮ್ ಅಗ್ರವಾಲ್

Update: 2025-04-29 20:44 IST

ಮಂಗಳೂರು, ಎ.29: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಹಳೆ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೇ 2ರಿಂದ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಸೇತುವೆಯ ಪಿಲ್ಲರ್‌ಗಳಲ್ಲಿ ಹೊಸ ಬೇರಿಂಗ್ ಅಳವಡಿಕೆ ಹಾಗೂ ಇತರ ಸಮಸ್ಯೆಗಳನ್ನು ಸರಿಪಡಿಸಲಾ ಗಿದೆ. ಪ್ರಸ್ತುತ ಕಾಂಕ್ರೀಟ್ ಕ್ಯೂರಿಂಗ್ ಆಗುತ್ತಿದೆ. ಅದಕ್ಕೆ ಇನ್ನೆರಡು ದಿನಗಳ ಅಗತ್ಯವಿದೆ ಎಂದು ತಿಳಿಸಿದ್ದು, ಮೇ 2ರಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಂಗಳವಾರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News