×
Ad

ಕೊಣಾಜೆ: ' ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-2025' ಉದ್ಘಾಟನೆ

Update: 2025-10-19 20:20 IST

ಕೊಣಾಜೆ: ಕ್ರೀಡಾಕೂಟಗಳು ನಮ್ಮಲ್ಲಿ ಆತ್ಮಸ್ಥೈರ್ಯ, ನಾಯಕತ್ವ ಗುಣವನ್ನು ಬೆಳೆಸುವುದೊಂದಿಗೆ ಸಂಘಟನಾತ್ಮಕ ಮನೋಭಾವವನ್ನು ಬೆಳೆಸಲು ಸಾಧ್ಯ. ಕೊಣಾಜೆ ಯುವವಾಹಿನಿ‌ ಘಟಕದ ಸಮಾಜಮುಖಿ ಕಾರ್ಯಗಳು ಮಾದರಿಯಾಗಿದ್ದು, ಇದೀಗ ಉತ್ತಮ ಉದ್ದೇಶದೊಂದಿಗೆ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಆಯೋಜಿಸಿರುವುದು ಮಾದರಿಯಾಗಿದೆ ಎಂದು ಸಹ್ಯಾದ್ರಿ ಕೋ ಅಪರೇಟಿವ್ ಸೊಸೈಟಿ, ತೊಕ್ಕೊಟ್ಟು ಇದರ ಅಧ್ಯಕ್ಷರಾದ ಕೆ ಟಿ ಸುವರ್ಣ ಅವರು ಹೇಳಿದರು.

ಯುವ ವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಹಾಗೂ ಗ್ರಾಮಚಾವಡಿ ಕೊಣಾಜೆ ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಸಹಯೋಗದೊಂದಿಗೆ ಯುವ ಸಂಜೀವಿನಿ ಸೇವಾ ಯೋಜನೆಯ ಸಹಾಯಾರ್ಥವಾಗಿ ಪುರುಷ ಮತ್ತು ಮಹಿಳೆಯರ ಅಂತರ್ ಘಟಕ ಶಟಲ್ ಬ್ಯಾಡ್ಮಿಂಟನ್ (ಜಿಸಿಕೆ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-2025 ) ಪಂದ್ಯಾಟವನ್ನು ಮಂಗಳೂರು ವಿವಿಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಗ್ರಾಮ ಚಾವಡಿ ಕೊಣಾಜೆ ಘಟಕ ದ ಅಧ್ಯಕ್ಷರಾದ ಬಾಬು ಬಂಗೇರ ಕೊಣಾಜೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಮ್ಮೆಂಬಳ ಸೇವಾ ಸಹಕಾರಿ ಸಂಘ ನಿ. ಮುಡಿಪು ಇದರ ಅಧ್ಯಕ್ಷರಾದ ಟಿ. ಜಿ. ರಾಜಾರಾಮ ಭಟ್, ಆತ್ಮ ಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಯುವವಾಹಿನಿ ಕೇಂದ್ರಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು , ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷರಾದ ವಿಜೇತ್ ಪಜೀರು, ಮಂಗಳೂರು ದೈಹಿಕ ಶಿಕ್ಷಣ ವಿಭಾಗದ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ಎಸ್ ಎಸ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ದಿವ್ಯಾ ನವೀನ್ ಸುವರ್ಣ, ಮೆಸ್ಕಾಂ ಉದ್ಯೋಗಿ ವಿನಯ ನಿತಿನ್, ಉದ್ಯಮಿ ರೋಝಿ ವ್ಯೋಂಗ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಡಿ ಕುಂದರ್, ಅರ್ಚಕರಾದ ಹರೀಶ್ ಶಾಂತಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಾಲಕೃಷ್ಣ ರಾವ್, ಮುಖಂಡರಾದ ಸೀತಾರಾಂ ಕರ್ಕೇರ,‌ ಯುವವಾಹಿನಿ ಕೇಂದ್ರ ಸಮಿತಿ ಕಾರ್ಯದರ್ಶಿ ಬಾಬು ಪೂಜಾರಿ, ಕೇಂದ್ರ ಸಮಿತಿ ಕ್ರೀಡಾ ನಿರ್ದೆಶಕ ತಾರಾನಾಥ್ ಕೋಟ್ಯಾನ್ , ಲೋಕೇಶ್ ಕೊಟ್ಯಾನ್, ನಿವೃತ್ತ ಶಿಕ್ಷಕಿ ಕ್ಯಾತರಿನ್ ಪಲ್ಲಟಿ, ನಿವೃತ್ತ ಶಿಕ್ಷಕ ಆನಂದ, ಕಾರ್ಯದರ್ಶಿ ಮಿಥುನ್ ಪಜೀರು ಮೊದಲಾದವರು ಭಾಗವಹಿಸಿದ್ದರು.

ಕ್ರೀಡಾ ನಿರ್ದೆಶಕರಾದ ಸುರೇಖಾ ಹರೀಶ್ ಪೂಜಾರಿ ಸ್ವಾಗತಿಸಿ,‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಿಥುನ್ ಪಜೀರು ವಂದಿಸಿಸರು. ವಿದ್ಯಾ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ಯುವವಾಹಿನಿ ಘಟಕದ ರಾಜ್ಯದ ವಿವಿಧ ತಂಡಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News