×
Ad

ಮೇ 22: ವಿವಿಧ ಕಡೆ ವಿದ್ಯುತ್‌ ನಿಲುಗಡೆ

Update: 2025-05-20 19:40 IST

ಮ೦ಗಳೂರು, ಮೇ ,20;ಕದ್ರಿ 33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಕದ್ರಿ ಟೆಂಪಲ್ ಫೀಡರ್‌ ನಲ್ಲಿ ಹಾಗೂ 33/11ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವೈದ್ಯನಾಥನಗರ ಫೀಡರ್‌ನಲ್ಲಿ ಮೇ 22 ರಂದು ವಿದ್ಯುತ್‌ ನಿಲುಗಡೆಗೊಳ್ಳಲಿದೆ.

ಅ೦ದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕದ್ರಿ ಟೆಂಪಲ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಾಗೂ ವೈದ್ಯನಾಥನಗರ ಫೀಡರ್‌ನಲ್ಲಿ ಮಾದರಿ ಉಪವಿಭಾಗದ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಗಳನ್ನು ಹಮ್ಮಿಕೊಳ್ಳ ಲಾಗಿದೆ. ಹಾಗಾಗಿ ಕದ್ರಿಕೈಬಟ್ಟಲ್‌, ವಾಟರ್‌ ವುಡ್‌, ಅತ್ತಾವರ ಕಟ್ಟೆ, ಮೆಸ್ಕಾಂ ಆಫೀಸ್‌, ವೈದ್ಯನಾಥನಗರ, ಅತ್ತಾವರ 5ನೇ ಕ್ರಾಸ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂಪ್ರಕಟಣೆ ತಿಳಿಸಿದೆ.

*ಮಣ್ಣಗುಡ್ಡ/ಉರ್ವ ಮಾರ್ಕೇಟ್/ ಲಾಲ್‌ಭಾಗ್ :ವಿದ್ಯುತ್‌ ನಿಲುಗಡೆ:- ಮಣ್ಣಗುಡ್ಡ 33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಉರ್ವ ಮಾರ್ಕೇಟ್‌, ವಾಟರ್‌ ಸಪ್ಲೈ, ಮಠದಕಣಿ, 1 ತ್ರಿಭುವಣ್‌, ಎಂ.ಜಿ ರೋಡ್‌ ಮತ್ತು 11ಕೆವಿ ಲಾಲ್‌ಭಾಗ್‌ ಫೀಡರ್‌ಗಳಲ್ಲಿ ಮೇ 22ರ೦ದು ವಿದ್ಯುತ್‌ ನಿಲುಗಡೆ ಗೊಳ್ಳಲಿದೆ ಅ೦ದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಫೀಡರ್‌ಗಳಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಗಾಂಧಿನಗರ, ಅಭಿಮಾನ್‌ ಪ್ಯಾಲೇಸ್‌, ಲೇಡಿಹಿಲ್‌, ಗಾಂಧಿಪಾರ್ಕ್‌, ಉರ್ವ ಗ್ರೌಂಡ್‌, ಸ್ಕೋಡಾ ಶೋರೂಮ್‌, ಜಾರಂದಾಯ ರಸ್ತೆ, ಕೊರಗಜ್ಜ ದೇವಸ್ಥಾನ, ಸುಲ್ತಾನ್‌ ಬತ್ತೇರಿ ರೋಡ್‌, ಬಿಲ್ಲವ ಸಂಘ, ಸುಲ್ತಾನ್‌ ಬತ್ತೇರಿ ಗ್ರೌಂಡ್‌, ಉರ್ವ ಮಾರ್ಕೆಟ್‌ಎದುರುಗಡೆ, ಅಕ್ಷಯ ಹಾಲ್‌, ಉರ್ವ ಮಾರಿಗುಡಿ ರಸ್ತೆ, ಚಾಮುಂಡೇಶ್ವರಿ ದೇವಸ್ಥಾನ, ದೈವಜ್ಞಾ ಕಲ್ಯಾಣ ಮಂಟಪ, ಹ್ಯೊಗೆಬೈಲು ರಸ್ತೆ,ಜೇಷ್ಟವುಡ್‌, ಯಶಸ್ವಿ ನಗರ, ಜಾಯ್‌ ಲೇನ್‌, ಉರ್ವ, ಗುಂಡೂರಾವ್‌ ಲೇನ್‌, ಮಠದಕಣಿ, ಬೊಕ್ಕಪಟ್ನ, ಮಿಷನ್‌ ಗೋರಿ, ಬರ್ಕೆ ಪೋಲೀಸ್‌ ಸ್ಟೇಷನ್‌, ಬೋಳೂರು, ತಿಲಕನಗರ, ವೇರ್‌ಹೌಸ್‌ ರೋಡ್‌, ಮಣ್ಣಗುಡ್ಡ, ಬಳ್ಳಾಲ್‌ ಬಾಗ್‌, ಕೊಡಿಯಾಲ್‌ ಬೈಲ್‌, ರತ್ನಾಕರ ಲೇಔಟ್‌, ವಿಶಾಲ್‌ ನರ್ಸಿಂಗ್‌ ಹೋಂ, ಟಿ.ಎಂ.ಎಪೈ ಹಾಲ್‌, ಎಂ.ಜಿ ರೋಡ್‌, ಹಿಂದಿ ಪ್ರಚಾರ ಸಮಿತಿ, ಲಾಲ್‌ಬಾಗ್‌, ಲೇಡಿಹಿಲ್‌ ಸರ್ಕಲ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.

ತೋಡಾರ್/ನಿಡ್ಡೋಡಿ: ವಿದ್ಯುತ್‌ ನಿಲುಗಡೆ

ಮೂಡಬಿದ್ರೆ 110/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ತೋಡಾರ್, ನಿಡ್ಡೋಡಿ ಫೀಡರ್ ಗಳಲ್ಲಿ ಮೇ 22 ರಂದು ವಿದ್ಯುತ್‌ ನಿಲುಗಡೆಗೊಳ್ಳಲಿದೆ.

ಅ೦ದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಈ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ನಿಡ್ಡೋಡಿ, ನೆಲ್ಲಿಗುಡ್ಡೆ, ಸಂಪಿಗೆ, ಕಲ್ಲಮುಂಡ್ಕೂರು, ಕುದ್ರಿಪದವು, ಬೋಂಟ್ರಡ್ಕೆ, ಅಶ್ವಥಪುರ, ಮಂಗೆಬೆಟ್ಟು, ನೀರ್ಕೆರೆ, ಕಾಯರ್ ಮುಗೇರು, ಕಳಕಬೈಲು, ಪುತ್ತಿಗೆ ಪದವು, ಹಂಡೇಲು, ಬಂಗೆಬೆಟ್ಟು,ತೋಡಾರ್ ಪಡೀಲು, ಪುದ್ದರಕೋಡಿ, ತೋಡರ್ ಪಲ್ಕೆ, ಮಿಜಾರ್, ಮೈಟ್, ಕೊಪ್ಪದ ಕುಮೇರು, ತೋಡಾರ್ ಗರಡಿ, ಪತ್ತೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.

*ನಂದಿಕೂರು/ಮುಲ್ಕಿ: ವಿದ್ಯುತ್‌ ನಿಲುಗಡೆ:- ನಂದಿಕೂರು-ಮುಲ್ಕಿ110/11 ಕೆವಿ ವಿದ್ಯುತ್ ಮಾರ್ಗದಲ್ಲಿ ಮೇ 22 ರಂದು ವಿದ್ಯುತ್‌ ನಿಲುಗಡೆಗೊಳ್ಳಲಿದೆ.ಅ೦ದು ಬೆಳಗ್ಗೆ 10 ರಿಂದ ಸಂಜೆ 5:30 ಗಂಟೆಯವರೆಗೆ ಈ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಮುಲ್ಕಿ, ಚಿತ್ರಾಪು, ಕಾರ್ನಾಡು, ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶಗಳು, ಕೆ.ಎಸ್.ರಾವ್ ನಗರ, ಶಿಮಂತೂರು, ಕವತ್ತಾರು, ಕಿನ್ನಿಗೋಳಿ,ಪುನರೂರು, ಪಕ್ಷಿಕೆರೆ, ಹಳೆಯಂಗಡಿ, ತೋಕೂರು, ಎಂ.ಆರ್.ಪಿ.ಎಲ್ ಕಾಲನಿ, ಗುತ್ತಕಾಡು, ಬಳ್ಕುಂಜೆ, ದಾಮಸ್ ಕಟ್ಟೆ, ಮೂರು ಕಾವೇರಿ, ಗೋಳಿಜೋರ, ಎಸ್ಕೋಡಿ, ಕೆರೆಕಾಡು, ಬಪ್ಪನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.

*ಬಜಪೆ ಟೌನ್/ ಕಟೀಲ್‌ ಟೆಂಪಲ್ : ವಿದ್ಯುತ್‌ ನಿಲುಗಡೆ:-220 ಕೆವಿ ಎಂ.ಎಸ್.ಇ.ಝೆಡ್ ಉಪಕೇಂದ್ರ ದಿಂದ ಹೊರಡುವ 11 ಕೆವಿ ಬಜಪೆ ಟೌನ್, ಪೆರ್ಮುದೆ, ಕಟೀಲ್ ಟೆಂಪಲ್ ಫೀಡರ್ ಗಳಲ್ಲಿ ಮೇ 22 ರಂದು ವಿದ್ಯುತ್‌ ನಿಲುಗಡೆಗೊಳ್ಳಲಿದೆ.ಅ೦ದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಈ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕಿನ್ನಿಪದವು, ಬಜಪೆ ಸಿಟಿ, ಕಲ್ಲಜರಿ, ಅಡ್ಕಬಾರೆ, ಪೋಲೀಸ್ ಸ್ಟೇಷನ್, ಹುಣ್ಸೆಕಟ್ಟೆ, ಶಿಬರೂರು, ಕೋರಕಂಬ್ಳ, ಪಡೀಲ್, ಕತ್ತಲ್ ಸಾರ್, ಪೆರ್ಮುದೆ, ಭಟ್ರಕೆರೆ, ಎಕ್ಕಾರು, ಕಟೀಲು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News