ಸುರತ್ಕಲ್| ಕಾಣೆಯಾದ ಯುವಕನ ಪತ್ತೆಗೆ ಮನವಿ
Update: 2025-12-24 20:30 IST
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಧನರಾಜ್ (25) ಎಂಬವರು ಡಿ.19ರಿದ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಹೋಮ್ ನರ್ಸ್ ಕೆಲಸ ಮಾಡಿಕೊಂಡಿದ್ದ ಧನರಾಜ್ ತಿಂಗಳಿಗೊಮ್ಮೆ ಮನೆಗೆ ಹೋಗುತ್ತಿದ್ದರು. ಡಿ.19ರಂದು ಮನೆಯಲ್ಲಿ ಜಗಳ ಮಾಡಿ ಮನೆ ಬಿಟ್ಟು ಹೋದವರು ಡಿ.21ರಂದು ನಾನು ಇನ್ನು ಮನೆಗೆ ಬರುವುದಿಲ್ಲ ಎಂದು ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಧನರಾಜ್‌ರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
5 ಅಡಿ ಎತ್ತರದ, ಸಪೂರ ಶರೀರದ ಧನರಾಜ್ ಮನೆಯಿಂದ ಹೊರ ಹೋಗುವಾಗ ಕಪ್ಪುಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಧನರಾಜ್‌ರ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.