×
Ad

ಎಸೆಸ್ಸೆಲ್ಸಿ ಫಲಿತಾಂಶ: 818 ತುಳು ಭಾಷಾ ವಿದ್ಯಾರ್ಥಿಗಳು ತೇರ್ಗಡೆ

Update: 2025-05-02 19:35 IST

ಮಂಗಳೂರು, ಮೇ 2: ಪ್ರಸಕ್ತ ಸಾಲಿನಎಸೆಸ್ಸೆಲ್ಸಿ ಪರೀಕ್ಷೆಯ ತುಳು ಭಾಷಾ ವಿಷಯದಲ್ಲಿ 818 ವಿದ್ಯಾರ್ಥಿ ಗಳು ತೇರ್ಗಡೆಯಾಗಿರುತ್ತಾರೆ.

ದ.ಕ. ಹಾಗೂ ಉಡುಪಿ ಜಿಲ್ಲೆಯ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಭಾಷೆಯನ್ನು ಆಯ್ದ ಕೊಂಡು 847 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 818 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಅದರಲ್ಲಿ 317 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು ಪಡೆದಿರುತ್ತಾರೆ.

ತುಳು ಪಠ್ಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದನೆ ಸಲ್ಲಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News