×
Ad

ಮಂಗಳೂರು: BITಯಿಂದ ಬಿಎಸ್‌ಎಸ್‌ಎಫ್ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮ

Update: 2025-01-13 22:35 IST

ಮಂಗಳೂರು: ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೆಮಿನಾಲ್ ಹಾಲ್‌ನಲ್ಲಿ ಬ್ಯಾರಿ ಶಿಕ್ಷಾ ಸುರಕ್ಷಾ ಫೌಂಡೇಶನ್ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಜ.11ರಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ಬಿಐಟಿ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಹಾಗೂ ಸಮುದಾಯದ ಪ್ರಗತಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿತ್ತು.

ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ, ಸ್ವಾಗತ ಭಾಷಣ ಮಾಡಿದ ಬಿಐಟಿ ಸಂಸ್ಥೆಯ ಪ್ರಾಂಶುಪಾಲ ಡಾ. ಮಂಜೂರ್ ಬಾಶಾ, ಶೈಕ್ಷಣಿಕ ಪ್ರಗತಿ ಸಾಧಿಸುವುದರಲ್ಲಿ ಬ್ಯಾರಿ ಶಿಕ್ಷಾ ಸುರಕ್ಷಾ ಫೌಂಡೇಶನ್ ನ ಪ್ರಾಮುಖ್ಯತೆ ಕುರಿತು ವಿವರಿಸಿದರು.

ಈ ಕಾರ್ಯಕ್ರಮದ ಭಾಗವಾಗಿ ಒಟ್ಟು 4,79,000 ರೂಪಾಯಿ ಮೊತ್ತವನ್ನು ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆ ಮೂಲಕ ಭವಿಷ್ಯದ ಪೀಳಿಗೆಯನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಬಿಐಟಿ ಸಂಸ್ಥೆಯ ಬದ್ಧತೆ ಪ್ರತಿಫಲನಗೊಂಡಿತು.

ಸ್ಪೂರ್ತಿದಾಯಕ ಭಾಷಣ ಮಾಡಿದ ಬಿಐಟಿ ಸಂಸ್ಥೆಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಶಿಕ್ಷಣದ ಮೂಲಕ ಸಮುದಾಯದ ಅಭಿವೃದ್ಧಿಯ ಸಮಗ್ರ ಪ್ರಯತ್ನಗಳ ಪರಿವರ್ತನಕಾರಿ ಪರಿಣಾಮದ ಬಗ್ಗೆ ಬೆಳಕು ಚೆಲ್ಲಿದರು. ಸಂಸ್ಥೆಯ ಶಿಕ್ಷಣ ಹಾಗೂ ಸಾಮಾಜಿಕ ಕಾಳಜಿ ಕುರಿತ ನಿರಂತರ ಬದ್ಧತೆಯನ್ನು ಗಣ್ಯ ಅತಿಥಿಗಳೂ ಶ್ಲಾಘಿಸಿದರು.

ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ನೆರವಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಹೀನಾ ಕೌಸರ್ ಪಿ.ಎ. ವಂದನಾರ್ಪಣೆ ಮಾಡಿದರು.















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News