×
Ad

ಫೆ.16: ಉಚಿತ ಬಟ್ಟೆಬರೆ ಪಡೆಯಲು ಅವಕಾಶ

Update: 2025-02-10 17:47 IST

ಮಂಗಳೂರು: ಉಳ್ಳಾಲದ ರಹ್ಮಾನಿಯಾ ಜುಮಾ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಶನ್ ವತಿಯಿಂದ ಮದುಮಗಳ ಸಹಿತ ಮತ್ತಿತರರಿಗೆ ಉಚಿತವಾಗಿ ವಸ್ತ್ರಗಳನ್ನು ಪಡೆಯಲು ಫೆ.16ರಂದು ಅವಕಾಶ ಕಲ್ಪಿಸಲಾಗಿದೆ.

ಈಗಾಗಲೆ ತಿಂಗಳ ಆರಂಭದಲ್ಲಿ ಎರಡು ದಿನ ಉಚಿತವಾಗಿ ಮದುಮಗಳ ಸಹಿತ ಇತರರು ಬಳಸಬಹುದಾದ ಬಟ್ಟೆ ಬರೆಗಳನ್ನು ವಿತರಿಸಲಾಗಿತ್ತು. ಅದಕ್ಕೆ ವ್ಯಕ್ತವಾದ ಬೆಂಬಲದಿಂದ ಇದೀಗ ಫೆ.16ರಂದು ಬೆಳಗ್ಗಿನಿಂದ ಸಂಜೆವರೆಗೆ ವಸ್ತ್ರ ವಿತರಣೆ ನಡೆಯಲಿದೆ. ಅಗತ್ಯವುಳ್ಳವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಅಂದಹಾಗೆ, ಮದುವೆ ಹೆಣ್ಣಿನ ವಸ್ತ್ರಕ್ಕಾಗಿ ಆಧಾರ್ ಕಾರ್ಡ್ ಮತ್ತು ಮದುವೆಯ ಆಮಂತ್ರಣ ಪತ್ರ ತೋರಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News