×
Ad

ಫೆ.25: ಕಲಾಯನ -ಜಾನಪದ ಸಮೂಹ ನೃತ್ಯ ಸ್ಪರ್ಧೆ

Update: 2025-02-24 21:50 IST

ಮಂಗಳೂರು, ಫೆ.24: ಅವಿನಾಶ್ ಫೋಕ್ ಡ್ಯಾನ್ಸ್ ಮಂಗಳೂರು(ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೂರನೇ ವರ್ಷದ ‘ಕಲಾಯನ ’ ಜಾನಪದ ಸಮೂಹ ನೃತ್ಯ ಸ್ಪರ್ಧೆ ಫೆ.25ರಂದು ಬೆಳಗ್ಗೆ 8ರಿಂದ ಉರ್ವ ಸ್ಟೋರ್‌ನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವಿನಾಶ್ ಫೋಕ್ ಡ್ಯಾನ್ಸ್ ಮಂಗಳೂರು (ರಿ)ಇದರ ಸಂಚಾಲಕರಾದ ಅವಿನಾಶ್ ಅವರು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಲಿ ರುವರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಮತ್ತು ಮನಪಾ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಭಾಗವಹಿಸಲಿದ್ದಾರೆ ಎಂದು ಅವಿನಾಶ್ ಮಾಹಿತಿ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಾದ ವಿನೋದ್ ಕೆ.ಎಸ್, ಡಾ.ದೀಪಾ ಮತ್ತು ಆದ್ಯಾ ವಿಜಯನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಶಿವ ಮಂಡ್ಯ, ಸುಧಾಕರ ಸಾಲ್ಯಾನ್, ಕೀರ್ತನ್, ಸಂದೇಶ ವಿಜಯ, ತಾರಾನಾಥ ಉರ್ವ, ಸನತ್ ಆಳ್ವ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News