ಫೆ.8: ಕುದ್ರೋಳಿ ಉರೂಸ್ ಸಮಾರೋಪ
Update: 2025-02-07 21:11 IST
ಮಂಗಳೂರು, ಫೆ.7: ನಗರದ ಕುದ್ರೋಳಿ ಕರ್ಬಲಾ ಕಾಂಪೌಂಡಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮದ ಸಮಾರೋಪವು ಫೆ.8ರ ಇಶಾ ಬಳಿಕ ನಡೆಯಲಿದೆ.
ಅಸ್ಸಯ್ಯಿದ್ ಸೈಫುದ್ದೀನ್ ಜಮಾಲುಲೈಲಿ ತಂಳ್ ಫೈಝಿ ಮನ್ನಾರ್‌ಕಾಡ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಮಸೀದಿಯ ಖತೀಬ್ ಮಹಮ್ಮದ್ ಬಾಖವಿ ಮತಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.