×
Ad

ಶಿಕ್ಷಣವನ್ನು ಎಂದಿಗೂ ನಿಲ್ಲಿಸಬೇಡಿ: ವಿದ್ಯಾರ್ಥಿಗಳಿಗೆ ಝಕರಿಯಾ ಜೋಕಟ್ಟೆ ಹಿತವಚನ

ಅಲ್ ಇಬಾದ ಇಂಡಿಯನ್ ಸ್ಕೂಲ್‌ನಲ್ಲಿ ರಾಜ್ಯೋತ್ಸವ ಪುರಸ್ಕೃತ ಝಕರಿಯಾ ಜೋಕಟ್ಟೆ ಅವರಿಗೆ ಸನ್ಮಾನ ಸಮಾರಂಭ

Update: 2025-11-18 18:46 IST

ಪೇರಂಪಳ್ಳಿ: “ಪರಿಸ್ಥಿತಿ ಏನೇ ಇರಲಿ, ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಎಂದಿಗೂ ನಿಲ್ಲಿಸಬೇಡಿ” ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅನಿವಾಸಿ ಉದ್ಯಮಿ ಅಲ್ ಮುಝೈನ್ ಕಂಪೆನಿ ಸಿಇಒ ಝಕರಿಯಾ ಜೋಕಟ್ಟೆ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಉಡುಪಿಯ ಪೇರಂಪಳ್ಳಿಯಲ್ಲಿರುವ ಅಲ್ ಇಬಾದ ಇಂಡಿಯನ್ ಸ್ಕೂಲ್‌ನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕಾಗಿ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ವೃತ್ತಿಪರ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಪ್ರಾಂಶುಪಾಲೆ ಝುವೇರಿಯಾ ಹಯಾತ್ ಅವರು ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕಲಿಕೆಯನ್ನು ಸಮತೋಲನಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜ್ಞಾನವು ವ್ಯಕ್ತಿತ್ವವನ್ನು ರೂಪಿಸಿದಾಗ ನಿಜವಾದ ಯಶಸ್ಸು ದೊರೆಯುತ್ತದೆ ಎಂದ ಅವರು, ಜೋಕಟ್ಟೆ ಅವರ ಶಾಲಾ ಪ್ರವಾಸಕ್ಕೆ ನೀಡಿದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದರು.

ಮುಖ್ಯ ಅತಿಥಿಯ ಸಾಧನೆಗಳನ್ನು ಶ್ಲಾಘಿಸಿದ ಅಧ್ಯಕ್ಷ ಬಶೀರ್ ಸಾಗರ್, ಶಾಲೆಯ ಶಿಸ್ತು, ವಿದ್ಯಾರ್ಥಿಗಳ ಗುಣ ನಡತೆ ಹಾಗೂ ಕ್ಯಾಂಪಸ್ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ಝಕರಿಯಾ ಜೋಕಟ್ಟೆ ಅವರಿಗೆ ಕೃತಜ್ಞತೆ ಅರ್ಪಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಝಕರಿಯಾ ಜೊಕಟ್ಟೆ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅವರ ಉದ್ಯಮ, ನಾಯಕತ್ವ ಹಾಗೂ ಮಾನವೀಯ ಸೇವೆಗಳನ್ನುಇದೇ ಸಂದರ್ಭದಲಿ ಸ್ಮರಿಸಲಾಯಿತು. ದೇಶ-ವಿದೇಶಗಳಲ್ಲಿ ಪ್ರಭಾವ ಬೀರುತ್ತಿರುವ ಜೋಕಟ್ಟೆ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಕ್ಷಣ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿತು.

ಶಾಲೆಯ ಅಧ್ಯಕ್ಷ ಬಶೀರ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಾಂಶುಪಾಲೆ ಝುವೇರಿಯಾ ಹಯಾತ್, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮವು 4ನೇ ತರಗತಿಯ ಅಹ್ಮದ್ ಅಕ್ಷರ್ ಅವರ ಕುರಾನ್ ಪಠಣದಿಂದ ಪ್ರಾರಂಭವಾಯಿತು. 8ನೇ ತರಗತಿಯ ಸಾರಾ ಅರ್ಷಿಯಾ ನಿರೂಪಿಸಿದರು. ಮಿಶಾ ಅಮಾನಿ ಸ್ವಾಗತ ಭಾಷಣ ಮಾಡಿದರು. ರಶಾ ಧನ್ಯವಾದ ಅರ್ಪಿಸಿದರು.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News