ಗುರುಪುರ ಪೊಂಪೈ ಚರ್ಚ್‌ನ ವಾರ್ಷಿಕ ಮಹೋತ್ಸವ
Update: 2025-11-12 16:38 IST
ಮಂಗಳೂರು, ನ.12: ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವವು ಬುಧವಾರ ದಿವ್ಯಬಲಿ ಪೂಜೆಯೊಂದಿಗೆ ಬಹು ವಿಜೃಂಭಣೆಯಿಂದ ನೆರವೇರಿತು.
ಫಾ.ಮುಲ್ಲರ್ ವೈದಕೀಯ ಸೇವಾ ಸಂಸ್ಥೆಗಳ ನಿರ್ದೇಶಕ ಫಾ. ಫಾವುಸ್ತಿನ್ ಲೋಬೊರವರು ದಿವ್ಯಬಲಿಪೂಜೆ ನೆರವೇರಿಸಿದರು. ದೇವಾಲಯದ ಗುರು ಹಾಗೂ ಪೇಜಾವರ ವಲಯದ ವಿಗಾರ್ ವಾರ್ ಫಾ. ರುಡೊಲ್ಫ್ ರವಿ ಡೆಸಾ, ಪೇಜಾವರ ವಲಯದ ಮತ್ತು ದೇವಾಲಯದ ಸ್ಥಳೀಯ ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.