×
Ad

ಬೈಕಂಪಾಡಿ: ಮೊಹಿಯುದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2023-08-15 16:38 IST

ಬೈಕಂಪಾಡಿ: ಮೊಹಿಯುದ್ದೀನ್ ಜುಮ್ಮಾ ಮಸ್ಜಿದ್ ಮುಸ್ಲಿಂ ಜಮಾಅತ್ (ರಿ) ಬೈಕಂಪಾಡಿ ವತಿಯಿಂದ ದೇಶದ 77ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ವನ್ನು ಜಮಾಅತ್‌ ನ ಅಧ್ಯಕ್ಷ ರಾದ ಜನಾಬ್ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ರವರು‌ ನೆರವೇರಿಸಿ ಮಾತನಾಡಿದರು.

ಖತೀಬರಾದ ಯಕೂಬ್‌ ಮದನಿ ರವರು ಸ್ವಾತಂತ್ರೋತ್ಸವದ ಬಗ್ಗೆ ಸಂದೇಶ ನೀಡಿದರು.

ಜಮಾತ್ ಕಾರ್ಯದರ್ಶಿ ಹಸನ್ ಶಮೀರ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಬದ್ರಿಯಾ ಕಮಿಟಿ ಅಧ್ಯಕ್ಷರಾದ ಅಡ್ವಕೇಟ್ ಮುಕ್ತಾರ್ ಅಹ್ಮದ್, ಜಮಾಅತ್ ಮಾಜಿ ಕಾರ್ಯದರ್ಶಿ ಸೈದುದ್ದೀನ್, ಆಡಳಿತ ಕಮಿಟಿ ಸದಸ್ಯರಾದ ರಫೀಕ್,  ಮೋನಾಕ, ಇಲ್ಯಾಸ್, ಯಾಹ್ಯ, ಅಡ್ಕಾ ಇಮಾಮಾರಾದ ಶಾಫಿ ಸಖಾಫಿ, ಎನ್ ಡಿ ಅಬ್ದುಲ್ ರಹಿಮಾನ್ ಮದನಿ, ಮಿಸ್ಬಹುಲ್ ಊಲೂಮ್ ಮದರಸದ ಸದರ್ ಉಸ್ತಾದರಾದ ರಿಝ್ವಾನ್ ಸಖಾಫಿ, ಮುಹಲ್ಲಿಂ ಶಾಕೀರ್ ಸಖಾಫಿ, ಬದ್ರಿಯಾ ಮದರಸ ಮುಹಲ್ಲಿಂರಾದ ಫವಾಝ್ ಸಅದಿ , ಮತ್ತು ಜಮಾತ್ ನ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.

ಸ್ವಾತಂತ್ರೋತ್ಸವದ ನಿಮಿತ್ತ ಅಡ್ಡಾ ಪರಿಸರದಲ್ಲಿ ಮರಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News