×
Ad

ಬಜ್ಪೆ: ಅಕ್ರಮ ಮರಳು ತೆಗೆಯುತ್ತಿದ್ದ ಆರೋಪ; ಪೊಲೀಸರಿಂದ ದಾಳಿ

Update: 2023-07-20 22:49 IST

ಸಾಂದರ್ಭಿಕ ಚಿತ್ರ

ಬಜ್ಪೆ: ಇಲ್ಲಿನ ನಡುಗೋಡು ಗ್ರಾಮದ ಕುತುಕೊಳಿ ಎಂಬಲ್ಲಿ ನಂದಿನಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಆರೋಪದಲ್ಲಿ ಪೊಲೀಸ್ ನಿರೀಕ್ಷಕ ಪ್ರಕಾಶ್ ನೇತೃತ್ವದ ತಂಡ ಗುರುವಾರ ಬೆಳಿಗ್ಗೆ ದಾಳಿ ಮಾಡಿದೆ. 

ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಒಂದು ಕಬ್ಬಿಣದ ಬೋಟ್, ಡೀಸೆಲ್ ಮೋಟರ್ ಹಾಗು ಇತರ ವಸ್ತುಗಳು ಸೇರಿದಂತೆ ಸುಮಾರು ಐದು ಯೂನಿಟ್ ನಷ್ಟು ಮರಳನ್ನು ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳನ್ನು ಕಳವು ಮಾಡುತ್ತಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News