ಬಜ್ಪೆ: ಅಕ್ರಮ ಮರಳು ಸಾಗಾಟ ಆರೋಪ; ಲಾರಿ ವಶ
Update: 2023-10-12 22:53 IST
ಸಾಂದರ್ಭಿಕ ಚಿತ್ರ
ಬಜ್ಪೆ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಲಾರಿಯೊಂದನ್ನು ಪತ್ತೆ ಹಚ್ಚಿದ ಬಜ್ಪೆ ಪೊಲೀಸರು ಲಾರಿ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಜ್ಪೆ ಪೊಲೀಸ್ ಠಾಣೆಯ ಪಿಎಸ್ಸೈ ಗುರುವಪ್ಪ ಕಾಂತಿ ಅವರು ಅ.11ರಂದು ರಾತ್ರಿ ಗಸ್ತಿನಲ್ಲಿದ್ದ ಸಂದರ್ಭ ಲಾರಿಯೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಗುರುಪುರ ಪದವಿ ಪೂರ್ವ ಕಾಲೇಜು ಬಳಿ ಲಾರಿಯನ್ನು ಅಡ್ಡ ಹಾಕಿ ನಿಲ್ಲಿದ ಪೊಲೀಸರು, ಲಾರಿಯ ಬಳಿಗೆ ಬರುಷ್ಟರಲ್ಲಿ ಚಾಲಕ ಲಾರಿಯಿಂದ ಇಳಿದು ಪರಾರಿಯಾಗಿ ದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಒಂದು ಲಾರಿ, ಅದರಲ್ಲಿದ್ದ ಸುಮಾರು 1ಯೂನಿಟ್ ನಷ್ಟು ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಲಾರಿಯ ಚಾಲಕ ಮತ್ತು ಮಾಲಕನ ಮೇಲೆ ಅಕ್ರಮ ಮರಳು ಸಾಗಾಟದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.