×
Ad

ಬಜ್ಪೆ: ಲಾರಿ, ಜೆಸಿಬಿಗಳ ಬ್ಯಾಟರಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2023-08-08 22:55 IST

ಬಜ್ಪೆ, ಆ.8: ರಾತ್ರಿ ಸಮಯ ನಿಲ್ಲಿಸಿದ್ದ ಲಾರಿ, ಜೆಸಿಬಿಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಮೂಡುಪೆರೆರಾ ಗ್ರಾಮ ಈಶ್ವರಕಟ್ಟೆ, ರಾಘವೇಂದ್ರ ಭಜನಾ ಮಂದಿರ ಬಳಿಯ ನಿವಾಸಿ ಪ್ರದೀಪ್‌ (20), ಕಂದಾವರ ಗ್ರಾಮದ ನಿವಾಸಿ ಅನೀಲ್ (23) ಬಂದಿತ ಆರೋಪಿಗಳು. ಬಂಧಿತರಿಂದ ಸುಮಾರು 4 ಲಕ್ಷ ರೂ. ಮೌಲ್ಯದ ಒಂದು ಕಾರು ಮತ್ತು 1.50 ಲಕ್ಷ ರೂ. ಮೌಲ್ಯದ ಒಟ್ಟು 17 ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅದ್ದೂರು, ಕೈಕಂಬ ಮತ್ತು ಗುರುಪುರ ಪರಿಸರಗಳಲ್ಲಿ ಪಾರ್ಕ್‌ ಮಾಡಿದ್ದ ಟಿಪ್ಪರ್ ಲಾರಿ, ಜೆ.ಸಿ.ಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಆ.8ರಂದು ಬ್ಯಾಟರಿಗಳನ್ನು ಕಾರೊಂದರಲ್ಲಿ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿರುವ ಕುರಿತು ಬಜ್ಪೆ ಪೊಲೀಸ್‌ ನಿರೀಕ್ಷಕ ಪ್ರಕಾಶ್‌ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಬಜ್ಪೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಸೊತ್ತು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಬಜ್ಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್‌ ಅವರ ನೇತೃತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್‌, ಲತಾ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಎಎಸ್ಸೈ ರಾಮಪೂಜಾರಿ, ಸುಜನ್, ರಶೀದ್ ಶೇಖ್, ಬಸವರಾಜ್‌ ಪಾಟೀಲ್‌, ಪ್ರಕಾಶ, ಕೆಂಚಪ್ಪ, ಕೆಂಚನಗೌಡ ಅವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News