×
Ad

ಬಜ್ಪೆ: ಪುಟ್ಟ ಮಗುವಿನೊಂದಿಗೆ ಸೇತುವೆ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ತಂದೆಯ ರಕ್ಷಣೆ

Update: 2024-11-10 18:28 IST

ಬಜ್ಪೆ: ತನ್ನ ಪುಟ್ಟ ಮಗುವನ್ನೆತ್ತಿಕೊಂಡು ತಂದೆಯೋರ್ವ ಗುರುಪುರ ಸೇತುವೆ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ಗುರುಪುರದಲ್ಲಿ ನಡೆದಿದೆ.

ಕೈಕಂಬದ ನಿವಾಸಿ ಸಂದೀಪ್ ಎಂಬಾತ ತನ್ನ ಎರಡು ವರ್ಷದ ಮಗುವನ್ನೆತ್ತಿಕೊಂಡು ಗುರುಪುರ ಸೇತುವೆಯ ಮೇಲೇರುವುದನ್ನು ಗಮನಿಸಿದ ಸ್ಥಳೀಯರು, ಆತ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆಂದು ಶಂಕೆಯಿಂದ ಆತನ ಮನವೊಲಿಸಿ ಸೇತುವೆಯಿಂದ ಕೆಳಗೆ ಇಳಿಸಿದ್ದಾರೆ‌. ಬಳಿಕ ಮಗು ಸಹಿತ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯ ಮೇಲೇರಿರುವುದಾಗಿ ತಿಳಿಸಿದ್ದು, ಪೊಲೀಸರು ಆತನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News