×
Ad

ಬಜ್ಪೆ: ರಾಷ್ಟ್ರಪತಿ ಸೇವಾ ಪದಕ ವಿಜೇತ ರಾಮ ಪೂಜಾರಿಗೆ ಸನ್ಮಾನ

Update: 2024-01-31 15:34 IST

ಬಜ್ಪೆ: 2024ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸಕ್ಕಾಗಿ ರಾಷ್ಟ್ರಪತಿಯವರಿಂದ ಸೇವಾ ಪದಕ ಪಡೆದುಕೊಂಡ ಬಜ್ಪೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮ ಪೂಜಾರಿಯ ಅವರಿಗೆ ಬಜ್ಪೆ ಕರಾವಳಿ ಟೀಮ್ ವತಿಂದ ಮಂಗಳವಾರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರಾವಳಿ ಟೀಮ್ ಅಧ್ಯಕ್ಷರಾದ ನಿಸಾರ್ ಕರಾವಳಿ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿರಾಜ್ ಬಜ್ಪೆ, ಉದ್ಯಮಿ ಇಫ್ತಿಕರ್ ಹಾಜಿ, ಕಿಶೋರ್ ಕುಮಾರ್, ಝುಬೈರ್ ಡಿಲಕ್ಸ್, ಹಕೀಮ್, ಅನ್ವರ್ ರಝಾಕ್, ಅಶ್ರಫ್ ಮತ್ತು ಠಾಣಾ ಸಿಬ್ಬಂದಿಗಳಾದ ಸುಜನ್ ಮತ್ತು ಪಾಟೀಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News