×
Ad

ಬಜ್ಪೆ: ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಯುವಕರು ನಾಪತ್ತೆ

Update: 2024-09-29 19:47 IST

ಬಜ್ಪೆ: ಇಲ್ಲಿನ ಮರವೂರು ಸೇತುವೆ ಕೆಳಗಿನ ನದಿಯಲ್ಲಿ ಈಜಲು ಇಳಿದಿದ್ದ ನಾಲ್ವರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟ‌ನೆ ರವಿವಾರ ಸಂಜೆ ವರದಿಯಾಗಿದೆ.

ನೀರಿನಲ್ಲಿ ಮುಳುಗಿ ನಾಪತ್ತೆಯಾದವರನ್ನು ಕೊಟ್ಟಾರ ಚೌಕಿ ನಿವಾಸಿ ಸುಮಿತ್(20), ಉರ್ವ ಅಂಗಡಿ ನಿವಾಸಿ ಅನೀಶ್(19) ಎಂದು ತಿಳಿದು ಬಂದಿದ್ದು, ಕೋಡಿಕಲ್ ನಿವಾಸಿ ಅರುಣ್(19), ಕೋಡಿಕಲ್ ಮಾಳೂರು ನಿವಾಸಿ ದೀಕ್ಷಿತ್(18) ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಸಂಜೆ 4 ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಮರವೂರು ಸೇತುವೆಯ ಅಡಿಯಲ್ಲಿ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಕೊಟ್ಟಾರ ಚೌಕಿ ನಿವಾಸಿ ಸುಮಿತ್ ಮತ್ತು ಉರ್ವ ಅಂಗಡಿ ನಿವಾಸಿ ಅನೀಶ್ ನೀರಿನ ಆಳ ತಿಳಿಯದೆ ನದಿಯಲ್ಲಿ ಇಳಿದ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ‌, ಈಜು ತಜ್ಞರ ತಂಡ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News