×
Ad

ಬಜ್ಪೆ| ಯುವಕನ ಕೊಲೆ ಪ್ರಕರಣ: ಆರೋಪಿ ಮಹಿಳೆ ಸೆರೆ

Update: 2024-10-31 22:06 IST

ಬಜ್ಪೆ: ವ್ಯಕ್ತಿಯೊಬ್ಬರ ಕುತ್ತಿಗೆಗೆ ಕೇಬಲ್‌ ವಯರ್‌ ನಿಂದ ಬಿಗಿದು ಕೊಲೆಗೈದಿರುವ ಘಟನೆ ಮುಲ್ಕಿಯ ಕೊಂಡೆಮೂಲ ಗ್ರಾಮದ ಗಿಡಿಗೆರೆ ದರ್ಖಾನ್ ಎಂಬಲ್ಲಿ ಅ.26ರಂದು ವರದಿಯಾಗಿದ್ದು, ಕೊಲೆ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಗಿಡಿಗೆರೆ ದರ್ಖಾಸ್ ನಿವಾಸಿ ದೇವಕಿ (42) ಕೊಲೆ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಗೀಡಾದ ವರನ್ನು ಗಿಡಿಗೆರೆ ದರ್ಖಾಸ್ ನಿವಾಸಿ ತಾರಾನಾಥ (39) ಎಂದು ತಿಳಿದು ಬಂದಿದೆ.

ಕೊಂಡೆಮೂಲ ಗ್ರಾಮದ ಕಟೀಲು ಪಿಎಚ್‌ಸಿ ಹಿಂಬದಿಯ ಗಿಡಿಗೆರೆ ದರ್ಖಾನ್ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕ್ ಬಳಿ ತಾರಾನಾಥ ಅವರ ಕುತ್ತಿಗೆಗೆ ಕೇಬಲ್‌ ವಯರ್‌ ನಿಂದು ಬಿಗಿದು ಕೊಲೆ ಗೈದ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಬಜ್ಪೆ ಪೊಲೀಸ್‌ ನಿರೀಕ್ಷಕ ಸಂದೀಶ್ ಜಿ.ಎಸ್. ಮತ್ತು ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು. ವಿಚಾರಣೆ ಆರಂಭಿಸಿದ ಪೊಲೀಸರು ಗಿಡಿಗೆರೆ ದರ್ಖಾಸ್ ನಿವಾಸಿ ದೇವಕಿ ಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ತಾರಾನಾಥನು ಪ್ರತೀ ದಿನ ಮದ್ಯ ಸೇವಿಸಿ ಬಂದು ಮನೆಯವರು ಹಾಗೂ ನನ್ನೊಂದಿಗೆ ಜಗಳ ಮಡುತ್ತಿದ್ದ. ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿ ದೇವಕಿ ಪೊಲೀಸ್‌ ವಿಚಾರಣೆಯ ವೇಳೆ ತಪ್ಪು ಒಪ್ಪಿಕೊಂಡಿದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ದೇವಕಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಬಜ್ಪೆ ಪೊಲೀಸರು, ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News