×
Ad

ಎಸ್ ವೈಎಸ್ ಉಳ್ಳಾಲ ಝೋನ್‌ನಿಂದ ಪ್ರಚಾರಾರ್ಥ ಸಭೆ

Update: 2025-04-17 18:34 IST

ಉಳ್ಳಾಲ : ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎ.18ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯ ಪ್ರಚಾರಾರ್ಥ ಎಸ್ ವೈಎಸ್ ಉಳ್ಳಾಲ ರೆನ್ ವತಿಯಿಂದ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಸಭೆ ನಡೆಯಿತು.

ಸಭೆಗೆ ಚಾಲನೆ ನೀಡಿ ಮಾತನಾಡಿದ ಎಸ್ ವೈಎಸ್ ಉಳ್ಳಾಲ ಝೋನ್‌ ಅಧ್ಯಕ್ಷ ಬಶೀರ್ ಸಖಾಫಿ, ಕರ್ನಾಟಕ ಉಲಮಾ ಕೋರ್ಡಿನೇಷನ್ ವತಿಯಿಂದ ಅಡ್ಯಾರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಎಲ್ಲರೂ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಅಲ್ ಮದೀನಾ ಮುದರ್ರಿಸ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಝೋನ್‌ ಸಂಘಟನಾ ಕಾರ್ಯದರ್ಶಿ ಸೈಯದ್ ಖುಬೈಬ್ ತಂಙಳ್, ಕೋಶಾಧಿಕಾರಿ ಶರೀಫ್ ಮಂಚಿಲ, ಮೀಡಿಯಾ ಕಾರ್ಯದರ್ಶಿ ಹಂಝ ಯು.ಬಿ., ಝೋನ್‌ ನಾಯಕರು ಮತ್ತಿತರರು ಭಾಗವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಸ್ವಾಗತಿಸಿದರು. ಝೋನ್‌ ಸಾಂತ್ವನ ಕಾರ್ಯದರ್ಶಿ ಇಸ್ಹಾಕ್ ಪೇಟೆ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News