×
Ad

ಮೇ. 17ರಂದು ದಾರುಲ್ ಇಲ್ಮ್ ಮದ್ರಸದ ನವೀಕೃತ ಕಟ್ಟಡ ಉದ್ಘಾಟನೆ

Update: 2025-05-16 14:34 IST

ಮಂಗಳೂರು, ಮೇ 16: ಫಳ್ನೀರ್‌ನ ಲುಲು ಸೆಂಟರ್‌ನಲ್ಲಿರುವ ದಾರುಲ್ ಇಲ್ಮ್ ಮದ್ರಸ ತನ್ನ 20ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಅದರ ಹಳೆಯ ಕಟ್ಟಡವನ್ನು ನವೀಕರಿಸಿ, ಮೇ 17 ರಂದು ಸಂಜೆ 4.30ಕ್ಕೆ ನವೀಕೃತ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ದಾರುಲ್ ಇಲ್ಮ್ ಸ್ಥಾಪಕ ರಫೀಉದ್ದೀನ್ ಕುದ್ರೋಳಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುದ್ರೋಳಿ ಜಾಮಿಯ ಮಸೀದಿ ಖಾಝಿ ಮುಫ್ತಿ ಮುತಾಹರ್ ಹುಸೈನ್ ಕಾಸಿಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಸಿ.ಪಿ. ಹಬೀಬ್ ರಹ್ಮಾನ್, ಅಬ್ದುಸ್ಸಲಾಮ್ ಪುತ್ತಿಗೆ, ಎಸ್.ಎಂ. ರಶೀದ್, ಅಬ್ದುಲ್ ಖಾದರ್ ಬಾವ, ಹೈದರ್ ಪರ್ತಿಪ್ಪಾಡಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

2005ಕ್ಕಿಂತ ಮೊದಲು ಫಳ್ನೀರ್ ಪ್ರದೇಶದಲ್ಲಿ ಯಾವುದೇ ಅಧಿಕೃತ ಮದ್ರಸ ಇರಲಿಲ್ಲ. ಆ ಕೊರತೆಯನ್ನು ನೀಗಿಸಲು ನಾವು ಅಲ್ಲಿ ಒಂದು ಮದ್ರಸವನ್ನು ಸ್ಥಾಪಿಸಿದ್ದೆವು. ಈಗ ಅದಕ್ಕೆ 20 ವರ್ಷಗಳಾಗಿವೆ. ಇಂದು ಮದ್ರಸಗಳ ಕುರಿತು ಅನೇಕ ರೀತಿಯ ಆರೋಪಗಳು ಹೇಳಿಕೆಗಳು ಕೇಳಿ ಬರುವ ಸಂದರ್ಭದಲ್ಲಿ ದಾರುಲ್ ಇಲ್ಮ್ ಮದ್ರಸ ಅದಕ್ಕೆ ಅಪವಾದ ಎಂಬಂತೆ ಬಹಳ ಮುಕ್ತ ಹಾಗು ಸ್ಪಟಿಕದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಾಪಕ ಮುಹಮ್ಮದ್ ಸೈಫುದ್ದೀನ್, ಮುಹಮ್ಮದ್ ಆಸಿಫ್, ಶೇಖ್ ಅಹ್ಮದ್, ಅಬೂಬಕರ್, ಆರ್ಶ್‌ಲಾನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News