×
Ad

ಡಿ.22-24: ಮಂಗಳೂರು ವಿವಿ ಸರಣಿ ಉಪನ್ಯಾಸ ಮಾಲಿಕೆ

Update: 2025-12-10 19:01 IST

ಮಂಗಳೂರು,ಡಿ.10: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರಿಂದ ಪಂಪ ಕವಿಯ ಆದಿಪುರಾಣ ಕಾವ್ಯದ ಕುರಿತು ಮೂರು ಉಪನ್ಯಾಸಗಳನ್ನು ಡಿ.22,23, 24ರಂದು ಸಂಜೆ 5:30 ರಿಂದ 6:30ರವರೆಗೆ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದೆ.

ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಎಂಬ ಉದ್ದೇಶದೊಂದಿಗೆ ನಡೆಯುವ ಈ ಮಾಲಿಕೆಯ ಎರಡನೇ ಸಂಚಿಕೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮುಂಚಿತವಾಗಿ ಮೊ.ಸಂ: 8904628052/8310300875ನ್ನು ಸಂಪರ್ಕಿಸಿ ಉಚಿತ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ವಿಭಾಗದ ಅಧ್ಯಕ್ಷ ಡಾ.ನಾಗಪ್ಪಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News