×
Ad

ಮಂಗಳೂರು | ಕರಾವಳಿ ಉತ್ಸವದ ಲೋಗೋ ತಯಾರಿಕೆ ಸ್ಪರ್ಧೆ

Update: 2025-12-10 18:51 IST

ಮಂಗಳೂರು,ಡಿ.10: ಪ್ರಸಕ್ತ (2025-26) ಸಾಲಿನ ಕರಾವಳಿ ಉತ್ಸವವು ಡಿ.20ರಿಂದ ನಡೆಯಲಿದೆ. ಈ ಉತ್ಸವಕ್ಕೆ ಲೋಗೋ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಮ್ಮಿಲನದ ಲೋಗೋವನ್ನು ತಯಾರಿಸಿ ಡಿ.17ರೊಳಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ (ದೂ.ಸಂ: 0824-2453926/906313259) ಅಥವಾ ಇ-ಮೇಲ್: adtourismmangalore@gmail.com ಗೆ ಸಲ್ಲಿಸಬಹುದು. ಉತ್ತಮ ಲೋಗೋ ತಯಾರಿಸಿದವರಿಗೆ 50,000 ರೂ. ಬಹುಮಾನವಾಗಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News