×
Ad

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷರಾಗಿ ಅಪ್ಪಿ ಎಸ್, ಗ್ರಾಮಾಂತರ ಅಧ್ಯಕ್ಷರಾಗಿ ಉಷಾ ಅಂಚನ್ ನೇಮಕ

Update: 2025-07-26 22:13 IST

ಅಪ್ಪಿ ಎಸ್ - ಉಷಾ ಅಂಚನ್ 

ಮಂಗಳೂರು, ಜು.26: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ಇಬ್ಬರು ನೂತನ ಅಧ್ಯರುಗಳ ನೇಮಕ ವಾಗಿದ್ದು, ಮಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಅಪ್ಪಿ.ಎಸ್ ಮತ್ತು ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿ ಉಷಾ ಅಂಚನ್ ನೇಮಕಗೊಂಡಿದ್ದಾರೆ.

ಇದೇ ವೇಳೆ ದ.ಕ. ಜಿಲ್ಲೆಯ ಇಬ್ಬರನ್ನು ರಾಜ್ಯ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ರಾಜ್ಯ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಮಿತಾ ಡಿ ರಾವ್ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಝೀನತ್ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್‌ ನಿಂದ ಕಳುಹಿಸಲಾದ ಪದಾಧಿಕಾರಿಗಳ ನೇಮಕಾತಿಯ ಪಟ್ಟಿಯನ್ನು ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ ಅಂಗೀಕರಿಸಿ, ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News