×
Ad

ಡಿ.ಕೆ.ಎಸ್.ಸಿ. ಪಾಣೆಮಂಗಳೂರು ಘಟಕ ಕಾರ್ಯಾರಂಭ

Update: 2024-10-10 14:03 IST

ಮಂಗಳೂರು: ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿ, ಮಂಗಳೂರು ಇದರ ಅಧೀನದಲ್ಲಿ ಪಾಣೆಮಂಗಳೂರು ಘಟಕ ಇತ್ತೀಚೆಗೆ ಕಾರ್ಯಾರಂಭಗೊಂಡಿತು.

ಆಲಡ್ಕ್ ಎಸ್.ಎಸ್.ಆಡಿಟೋಯಂ ಸಭಾಂಗಣದಲ್ಲಿ ಡಿ.ಕೆ.ಎಸ್.ಸಿ. ಜಿಲ್ಲಾ ಸಮಿತಿಯ ಅಧ್ಯಕ್ಷ ಅಸ್ಸೈಯದ್ ಅಹ್ಮದ್ ಮುಖ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಳ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಲ್ ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಅಲ್ ಖಾಸಿಮಿ ಅಳಕೆಮಜಲು ಉದ್ಘಾಟಿಸಿದರು.

ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಹಾಗೂ ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಮರ್ ಸಖಾಫಿ ಮಿತ್ತೂರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಟಿ.ಎಸ್.ಹನೀಫ್ ಹಾಜಿ ಆಫ್ರಿಕ, ಮುಹಮ್ಮದ್ ಇಂಜಿನಿಯರ್, ಹಮೀದ್ ಹಾಜಿ, ಮುಹಮ್ಮದ್ ಹಾಜಿ ಗುಡ್ಡೆಯಂಗಡಿ, ಡಿ.ಕೆ.ಎಸ್.ಸಿ. ಹಿರಿಯ ನೇತಾರ ಉಮರ್ ಹಾಜಿ ಮುಕ್ವೆ ಉಪಸ್ಥಿತರಿದ್ದರು.

ಝೈನುದ್ದೀನ್ ಮುಕ್ವೆ, ಅಹ್ಮದ್ ಶರೀಫ್ ಬಜ್ಪೆ, ಅಬ್ದುಸ್ಸಲಾಂ ಪಾಣೆಮಂಗಳೂರು, ಅನ್ವರ್ ಹುಸೈನ್ ಗೂಡಿನಬಳಿ, ಅಬ್ದುರ್ರಝಾಕ್ ಅಳಕೆಮಜಲು, ಇ.ಕೆ.ಇಬ್ರಾಹೀಂ ಕಿನ್ಯ, ಇಸ್ಮಾಯೀಲ್ ಶಾಫಿ ವಿಟ್ಲ ಹಾಜರಿದ್ದರು.

ಇದೇವೇಳೆ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಕೆ.ಸಿ.ಇಸ್ಮಾಯೀಲ್ ಹಾಜಿ ಕಿನ್ಯ ನೇತೃತ್ವದಲ್ಲಿ ನೂತನ ಶಾಖೆಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಉಮರ್ ಸಖಾಫಿ ಮಿತ್ತೂರು, ಪ್ರ.ಕಾರ್ಯದರ್ಶಿಯಾಗಿ ಸಿರಾಜ್ ಮೆಲ್ಕಾರ್, ಕೋಶಾಧಿಕಾರಿಯಾಗಿ ಶರೀಫ್ ಮಾರ್ನಬೈಲ್, ಸಹಾಯಕ ಕೋಶಾಧಿಕಾರಿಯಾಗಿ ಇಮ್ರಾನ್ ಪಾಣೆಮಂಗಳೂರು, ಸಂಘಟನಾ ಕಾರ್ಯದರ್ಶಿಯಾಗಿ ಮುಬಾರಕ್ ಕಾರಾಜೆ, ಮಾಧ್ಯಮ ಉಸ್ತುವಾರಿಯಾಗಿ ಬಶೀರ್ ಬೊಳ್ಳಾಯಿ, ಮುಖ್ಯ ಸಲಹೆಗಾರರಾಗಿ ಅಶ್ರಫ್ ಸಖಾಫಿ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಇಂಜಿನಿಯರ್, ಹನೀಫ್ ಚೇರ್ಮ್ಯಾನ್ ಸಜೀಪ, ಜೊತೆ ಕಾರ್ಯದರ್ಶಿಗಳಾಗಿ ಬಿ.ಬಿ.ರಝಾಕ್ ಬೊಳ್ಳಾಯಿ, ರಫೀಕ್ ಕಾರಾಜೆ, ಯಾಕೂಬ್ ಬಂಟ್ವಾಳ ಸಂಚಾಲಕರಾಗಿ ಮುಹಮ್ಮದ್ ಹಾಜಿ ಗುಡ್ಡೆಅಂಗಡಿ, ಅಬೂಬಕ್ಕರ್ ಗುಡ್ಡೆ ಅಂಗಡಿ ಆಯ್ಕೆಯಾದರು.

ಡಿ.ಕೆ.ಎಸ್.ಸಿ. ದಮ್ಮಾಮ್ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ಸ್ವಾಗತಿಸಿದರು.

ಮುಹಮ್ಮದ್ ಹಾಶಿಂ ಕಿರಾಅತ್ ಪಠಿಸಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News