×
Ad

ಗುರುಪುರ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಕಬಡ್ಡಿ, ವಾಲಿಬಾಲ್ ಪಂದ್ಯಾಟ

Update: 2023-08-17 23:25 IST

ಗುರುಪುರ: ಇಲ್ಲಿನ ಗುರುಪುರ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟವು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಅದ್ಯಪಾಡಿಯಲ್ಲಿ ಗುರುವಾರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅದಯಪಾಡಿ ಇವುಗಳ ಸಹಯೋಗದಲ್ಲಿ ನಡೆದ ಕ್ರೀಡಾಕೂಟವನ್ನು ಅತಿಥಿಗಳು ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬದ್ರುದ್ದೀನ್ ಅಧ್ಯಕ್ಷತೆ ವಹಿಸಿದ್ದರು

ವೇದಿಕೆಯಲ್ಲಿ ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಜೀವನ್ ಮಲ್ಲಿ, ವಿಜಯ ಸುವರ್ಣ, ಮಾಲತಿ ಶಿವರಾಜ್, ನಾಗೇಶ್ ಕುಲಾಲ್, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರವಿಶಂಕರ್ ನೀಲಾವರ, ಶಿಕ್ಷಣ ಸಂಯೋಜಕ ರಾದ ಎಚ್. ವಿಶ್ವನಾಥ್, ನಮ್ಮ ಗಂಜಿಮಠ ಮತ್ತು ತಿರುವೈಲ್ ಕ್ಲಸ್ಟರ್ ನ ಸಿ.ಆರ್.ಪಿಯವರಾದ ಶೀಲಾವತಿ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಾಜೀವಿ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಆದ್ಯಪಾಡಿಯ ಮುಖ್ಯ ಶಿಕ್ಷಕಿ ಭಾನುಮತಿ ಉಪಸ್ಥಿತರಿದ್ದರು. ಪಂದ್ಯಾಕೂಟದಲ್ಲಿ 40ತಂಡಗಳು ಭಾಗವಹಿಸಿದ್ದವು.

ವಿಜೇತರ ಹೆಸರುಗಳು:

ಬಾಲಕರ ವಿಭಾಗ ವಾಲಿಬಾಲ್:

ಪ್ರಥಮ: ಬಾಮಿ ತೆಂಕುಳಿಪಾಡಿ, ದ್ವಿತೀಯ: ವಿದ್ಯಾ ಜ್ಯೋತಿ ವಾಮಂಜೂರು

ಬಾಲಕಿಯರ ವಿಭಾಗ ವಾಲಿಬಾಲ್:

ಪ್ರಥಮ: ನವ ಚೇತನ ಆಂಗ್ಲ ಮಾಧ್ಯಮ ಶಾಲೆ, ನೀರು ಮಾರ್ಗ, ದ್ವಿತೀಯ: ಸ.ಹಿ.ಪ್ರಾ.ಶಾಲೆ ತಿರುವೈಲು

ಬಾಲಕರ ವಿಭಾಗ ಕಬಡ್ಡಿ:

ಪ್ರಥಮ: ಸ.ಹಿ.ಪ್ರಾ.ಶಾಲೆ ಕಣ್ಣೋರಿ, ದ್ವಿತೀಯ : ಸಹರಾ ಆಂಗ್ಲ ಮಾಧ್ಯಮ ಶಾಲೆ ಅಡ್ಡೂರು

ಬಾಲಕಿಯರ ವಿಭಾಗ ಕಬಡ್ಡಿ:

ಪ್ರಥಮ: ತೆಂಕ ಎಡಪದವು, ದ್ವಿತೀಯ: ರೋಸಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿ ಕಂಬಳ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News