×
Ad

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ದ.ಕ.ಜಿಲ್ಲೆಯಲ್ಲಿ ಮಾನವ ಸರಪಳಿ

Update: 2024-09-15 11:29 IST

ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ರವಿವಾರ ದ.ಕ.ಜಿಲ್ಲೆಯಲ್ಲಿ ಮೂಲ್ಕಿ ಹೆಜಮಾಡಿ ಟೋಲ್ ಗೇಟ್‍ನಿಂದ ಸುಳ್ಯ ಸಂಪಾಜೆ ಗೇಟ್‍ವರೆಗೆ ಬೃಹತ್ ಮಾನವ ಸರಪಳಿ ನಡೆಯಿತು.

ಮಂಗಳೂರಿನ‌ ಸರ್ಕ್ಯೂಟ್ ಹೌಸ್ ಬಳಿ ನಡೆದ ಬೃಹತ್ ಮಾನವ ಸರಪಳಿಯ ಸಭಾ ಕಾರ್ಯಕ್ರಮದಲ್ಲಿ ನಾಡಗೀತೆಯ ಬಳಿಕ ವಿಧಾನ ಪರಿಷತ್ ಸದಸ್ಯ‌ ಡಾ.ಮಂಜುನಾಥ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಶುಭ ಹಾರೈಸಿದರು. ದ.ಕ.ಜಿಲ್ಲಾಧಿಕಾರಿ ‌ಮುಲ್ಲೈ ಮುಗಿಲನ್ ಎಂಪಿ‌ ಅವರು ಸಂವಿಧಾನ ಪ್ರಸ್ತಾವನೆ ಓದಿದರು. ಬಳಿಕ ಮಾನವ ಸರಪಳಿ ನಡೆಯಿತು. ಮಾನವ ಸರಪಳಿ ಕಳಚಿದ ಬಳಿಕ ಕದ್ರಿ ಪಾರ್ಕ್ ನಲ್ಲಿ ಸಸಿ ನೆಡಲಾಯಿತು .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News