×
Ad

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಹಂಡೇಲಿನ ಮುಹಮ್ಮದ್ ಶಕೀರ್‌ಗೆ ಎರಡು ಚಿನ್ನದ ಪದಕ

Update: 2024-09-09 18:20 IST

ಮೂಡಬಿದಿರೆ, ಸೆ.9: ಮಂಗಳೂರಿನ ಶೌರ್ಯ ಹಾಗೂ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನ ಬ್ಲ್ಯಾಕ್ ಬೆಲ್ಟ್ ಸೀನಿಯನ್ ವಿಭಾಗದಲ್ಲಿ ಹಂಡೇಲಿನ ಮುಹಮ್ಮದ್ ಶಕೀರ್ ಎರಡು ಚಿನ್ನದ ಪದಕ ಗೆದ್ದಿದ್ದಾರೆ.

ಬ್ಲ್ಯಾಕ್‌ಬೆಲ್ಟ್ -75 ಕೆಜಿ ವಿಭಾಗದಲ್ಲಿ ಕುಮಿತೆ (ಫೈಟಿಂಗ್) ಚಿನ್ನದ ಪದಕ ಹಾಗೂ ಕಟ (ಫಾರ್ಮ್ಸ್) ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡು ಬೆಸ್ಟ್ ಫೈಟರ್ ಆಗಿ ಹೊರ ಹೊಮ್ಮಿದ್ದಾರೆ.

ಹಂಡೇಲಿನ ಮುಹಮ್ಮದ್ ಸಲೀಂ-ರಹ್ಮತ್ ದಂಪತಿಯ ಪುತ್ರನಾಗಿರುವ ಈತ ಮೂಡುಬಿದಿರೆಯ ರೆನ್ಶಿ ನದೀಮ್ ಹಾಗೂ ಶಿಯನ್ ಸರ್ಫ್ರಾಝ್‌ರ ಶಿಷ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News