ಅಮೇರಿಕಾದಲ್ಲಿ ಅಂತರಾಷ್ಟೀಯ ಶಾಸಕರ ಸಮ್ಮೇಳನ: ಐವನ್ ಡಿಸೋಜಾ ಆಯ್ಕೆ
Update: 2025-07-25 20:26 IST
ಮಂಗಳೂರು: ರಾಜ್ಯ ಶಾಸಕರ ರಾಷ್ಟೀಯ ಸಮಾವೇಶ ಹಾಗೂ ರಾಷ್ಟೀಯ ಶಾಸಕರ ಸಮಾವೇಶ ಸಂಸ್ಥೆಗಳ ಆಶ್ರಯದಲ್ಲಿ ಅಮೇರಿಕಾದ ಬೋಸ್ಟನ್ ನಗರದಲ್ಲಿ ಅಂತರಾಷ್ಟ್ರೀಯ ಶಾಸಕರ ಸಮ್ಮೇಳನ ನಡೆಯಲಿದ್ದು ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜಾ ಆಯ್ಕೆಯಾಗಿದ್ದಾರೆ.
ಈ ಶೃಂಗ ಸಭೆಯಲ್ಲಿ ಪ್ರಜಾತಂತ್ರ ಗಟ್ಟಿಗೊಳಿಸುವಿಕೆ ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯಲಿದೆ.