×
Ad

ಸ್ಪೀಕರ್ ಖಾದರ್‌ರಿಂದ ಅಂತರಾಷ್ಟ್ರೀಯ ಈಜುಕೊಳ ವೀಕ್ಷಣೆ

Update: 2023-10-21 18:48 IST

ಮಂಗಳೂರು : ನಗರದ ಎಮ್ಮೆಕರೆಯಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ಅಂತರಾಷ್ಟ್ರೀಯ ಈಜುಕೊಳವನ್ನು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಶನಿವಾರ ವೀಕ್ಷಿಸಿದರು.

ಈವರೆಗೆ ನಡೆದ ಕಾಮಗಾರಿಯ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ನವೆಂಬರ್ 24ರಿಂದ 26ರವರೆಗೆ ಈ ಈಜು ಕೊಳದಲ್ಲಿ ರಾಷ್ಟ್ರೀಯ ಮಟ್ಟದ ಈಜು ಕ್ರೀಡಾಕೂಟ ನಡೆಯಲಿದೆ. ದೇಶದ ವಿವಿಧ ಕಡೆಯಿಂದ ಸಾವಿರಕ್ಕೂ ಅಧಿಕ ಕ್ರೀಡಾ ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಈಜುಕೊಳದ ಪರಿಸರ ಮತ್ತು ಹೊರಾಂಗಣದ ಸೌಂದರೀಕರಣ ಕಾಮಗಾರಿ ನಡೆಸುವಂತೆ ಸೂಚಿಸಿದರು.

ಈ ಸಂದರ್ಭ ಶಾಸಕ ಹರೀಶ್ ಕುಮಾರ್, ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಪಾಲಿಕೆಯ ಸದಸ್ಯರಾದ ಎ.ಸಿ. ವಿನಯ್‌ರಾಜ್, ನವೀನ್ ಡಿಸೋಜ, ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಅರುಣ ಪ್ರಭಾ, ಕಾಂಗ್ರೆಸ್ ಮುಖಂಡ ತೇಜೋಮಯ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News